ಶನಿವಾರಸಂತೆ, ಅ. ೩: ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ದಲಿತ ಮುಖಂಡರುಗಳ ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು ಡಿವೈಎಸ್ಪಿ ಆರ್.ವಿ. ಗಂಗಾದರಪ್ಪ ವಹಿಸಿ ಮಾತನಾಡಿದರು.

ಸಂವಿಧಾನದ ೧೭ನೇ ಪರಿಚ್ಛೇದ ಕಾನೂನಿನ ಪರಿಚಯಿಸುತ್ತಾ ದಲಿತ ಸಂಘಟನೆಗಳು ಮಾಡುತ್ತಿರುವ ಕೆಲಸಗಳನ್ನು ಸೇವೆ ಎಂದು ಪರಿಗಣಿಸಬೇಕೇ ವಿನಃ ವೃತ್ತಿಯಾಗಿ ಅಲ್ಲ ಎಂದು ಸರಕಾರದಿಂದ ಎಸ್.ಸಿ., ಎಸ್.ಟಿ. ಜಾತಿಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅವುಗಳ ಉಪಯೋಗ ಪಡೆದುಕೊಳ್ಳುವಂತೆ ತಿಳಿಹೇಳಿ, ಪ್ರತಿ ತಿಂಗಳು ೩ನೇ ಭಾನುವಾರ ಪೊಲೀಸ್ ಠಾಣೆಯಲ್ಲಿ ಕಡ್ಡಾಯವಾಗಿ ದಲಿತ ಸಮಿತಿ ಸಭೆ ಕರೆಯುವಂತೆ ಇಲಾಖೆಗೆ ಸೂಚಿಸಿದರು.

ಸಭೆಯಲ್ಲಿ ದಲಿತ ಸಮಿತಿಯ ಮುಖಂಡರುಗಳಾದ ಹೆಚ್.ಬಿ. ಜಯಮ್ಮ, ಜೆ.ಆರ್. ಪಾಲಾಕ್ಷ, ರಾಜಪ್ಪ, ವೀರೇಂದ್ರ, ಮೋಹನ್ ದೇವರಾಜ್, ಕುಮಾರ, ಅಶೋಕ, ಇತರರು ಸುಮಾರು ೫೦ ಮಂದಿ ಹಾಜರಿದ್ದು, ಮಾತನಾಡುತ್ತಾ, ಸಣ್ಣಪುಟ್ಟ ವಿಚಾರಗಳಿಗೂ ಪ್ರಕರಣ ದಾಖಲಿಸುವುದು ಮಾರ್ಗವಲ್ಲ, ಕೆಲವೊಂದು ಘಟನೆಗಳಿಗೆ ಪರಸ್ಪರ ಮಾತನಾಡಿ, ಬಗೆಹರಿಸಿಕೊಳ್ಳಬಹುದು. ಸುಳ್ಳು ದೂರುಕೊಟ್ಟು ಪ್ರಕರಣ ದಾಖಲಾಗಿ, ನಿಜವಾಗಿ ನೊಂದ ದಲಿತರಿಗೆ ನ್ಯಾಯ ದೊರಕುತ್ತಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋವಿಂದರಾಜ್, ಸಹಾಯಕ ಠಾಣಾಧಿಕಾರಿ ಶಶಿಧರ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಎಸ್. ಪರಶಿವಮೂರ್ತಿ ಸ್ವಾಗತಿಸಿ, ವಂದಿಸಿದರು.