ಮಡಿಕೇರಿ, ಅ. ೩: ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ೩೪೮೪ ಸಶಸ್ತç ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅಕ್ಟೋಬರ್ ೩೧ ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿಗೆ hಣಣಠಿs://ಞsಠಿ.ಞಚಿಡಿಟಿಚಿಣಚಿಞಚಿ.gov.iಟಿ ಅಥವಾ hಣಣಠಿs://ಞsಠಿ-ಡಿeಛಿಡಿuiಣmeಟಿಣ.iಟಿ ವೀಕ್ಷಿಸಬಹುದು.

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಮತ್ತು ಪಿಎಸ್‌ಐ, ಎಪ್‌ಡಿಎ, ಎಸ್‌ಡಿಎ ಮತ್ತು ಪಿಡಿಒ ನೇಮಕಾತಿ ಪರೀಕ್ಷೆಗಳಿಗೆ ಅಗತ್ಯವಿರುವ ಕನ್ನಡ, ಇಂಗ್ಲಿಷ್, ಮೆಂಟಲ್ ಎಬಿಲಿಟಿ, ಜನರಲ್ ಸ್ಟಡೀಸ್, ಕರೆಂಟ್ ಅಪರ‍್ಸ್, ಪಂಚಾಯತ್ ರಾಜ್ ವಿಷಯಗಳನ್ನು ಅತ್ಯಂತ ನುರಿತ ವಿಷಯ ತಜ್ಞರಿಂದ ಬೋಧಿಸಲಾಗುವುದು. ತರಗತಿಗಳು ತಾ. ೧೦ ರಿಂದ ಪ್ರಾರಂಭವಾಗುತ್ತದೆ. ತರಬೇತಿಯ ಸಮಯದಲ್ಲಿ ಉಚಿತ ವಸತಿ ವ್ಯವಸ್ಥೆ ಇರುತ್ತದೆ. ಆಸಕ್ತರು ತಾ.೭ ರೊಳಗೆ ೮೬೬೦೨೧೭೭೩೯ ಅಥವಾ ೦೮೧೭೨-೨೪೫೧೩೫ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‌ನ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.