ಮಡಿಕೇರಿ, ಅ. ೨: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡಿರುವ ಮರೆನಾಡ್ ಕೊಡವ ಸಮಾಜದ ವತಿಯಿಂದ ಇತ್ತೀಚೆಗೆ ಸಮಾಜದ ಆವರಣದಲ್ಲಿ ಕೈಲ್‌ಪೊಳ್ದ್ ಸಂತೋಷ ಕೂಟ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾಜದ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಅವರ ಅಧ್ಯಕ್ಷತೆ ಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ಕೋವಿ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ಪುರುಷರು, ಮಹಿಳೆಯರು, ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ ಅವರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾತನಾಡಿದ ಅವರು, ಕೊಡವ ಸಂಸ್ಕೃತಿ, ಆಚಾರ - ವಿಚಾರದ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ, ಕಾರ್ಯಾಧ್ಯಕ್ಷ ಬೊಳ್ಳೆರ ಕೆ. ಪೊನ್ನಪ್ಪ, ಉಪಾಧ್ಯಕ್ಷರಾದ ಕುಪ್ಪಣಮಾಡ ಬೇಬಿ ನಂಜಮ್ಮ, ಕರ್ತಮಾಡ ಮಿಲನ್ ಮೇದಪ್ಪ, ಕಾರ್ಯದರ್ಶಿ ಅಯ್ಯಮಾಡ ರಿನೇಶ್ ಮುತ್ತಣ್ಣ, ಖಜಾಂಚಿ ಕಾಯಪಂಡ ಮಧು ಮೋಟಯ್ಯ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತಾ, ಮುಲ್ಲೇಂಗಡ ಮುತ್ತಣ್ಣ, ಅಣ್ಣಳಮಾಡ ಲಾಲ ಅಪ್ಪಣ್ಣ, ಬೊಟ್ಟಂಗಡ ವಿಶು, ಬಲ್ಯಮೀದೇರಿರ ರಾಜ, ಕಾಯಪಂಡ ಸತ್‌ಚಿಣ್ಣಪ್ಪ, ಮೀದೇರಿರ ರಾಜ ಮತ್ತಿತರರು ಪಾಲ್ಗೊಂಡಿದ್ದರು. ಬೇಬಿ ನಂಜಮ್ಮ ಪ್ರಾರ್ಥಿಸಿ ಪೊನ್ನಪ್ಪ ಸ್ವಾಗತಿಸಿದರು. ರಿನೇಶ್ ಮುತ್ತಣ್ಣ ವಂದಿಸಿದರು.