ಮಡಿಕೇರಿ, ಅ. ೩: ಕೊಡವ ಜನಾಂಗದ ವಿವಧ ಬೇಡಿಕೆಗಳ ಈಡೇರಿಕೆಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಯಿತು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ ಸೇರಿದಂತೆ ವಿವಿಧ ಇತರ ಆಶೋತ್ತರಗಳನ್ನು ಪರಿಗಣಿಸಲು ರಾಷ್ಟçಪತಿಗಳಿಂದ ಸುಗ್ರೀವಾಜ್ಞೆ ಘೋಷಣೆಗೆ ನಂದಿನೆರವAಡ ಯು. ನಾಚಪ್ಪ ಅವರ ನೇತೃತ್ವದ ಸಿ.ಎನ್.ಸಿ ಸಂಘಟನೆ ಆಗ್ರಹಿಸಿತು.
ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಕೊಡವ ಮೂಲ ವಂಶಸ್ಥರಿಗೆ ರಾಜ್ಯಾಂಗ ಖಾತ್ರಿ, ಕೊಡವ ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವುದು, ಕೊಡವ ಸಾಂಪ್ರದಾಯಿಕ ಬಳಕೆಯ ಕೋವಿಗೆ ಸಾಂವಿಧಾನಿಕ ಭದ್ರತೆ, ಕೊಡವ ಜನಪದ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋ ಇಂಟ್ಯಾAಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಗೆ ಸೇರಿಸುವ ಸಂಬAಧ, ಸೇರಿದಂತೆ ಒಟ್ಟು ೯ ಹಕ್ಕೊತ್ತಾಯ ಗಳನ್ನು ಪರಿಗಣಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ ಹಾಗೂ ಉಪವಿಭಾಗಾಧಿಕಾರಿ ಸತೀಶ್ ಉಲ್ಲಾಳ್ ಅವರ ಮೂಲಕ ರಾಷ್ಟçಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲಾಯಿತು. ಸತ್ಯಾಗ್ರಹದಲ್ಲಿ ಕೂಪದಿರ ಪುಷ್ಪ ಮುತ್ತಣ್ಣ, ಚೋಳಪಂಡ ಜ್ಯೋತಿ ನಾಣಯ್ಯ, ಲೆ.ಕರ್ನಲ್ ಬಿ.ಎಂ ಪಾರ್ವತಿ, ಕಲಿಯಂಡ ಪ್ರಕಾಶ್, ಬಾಚರಣಿ ಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಚೆಂಬAಡ ಜನತ್ ಕುಮಾರ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಬೇಪಡಿಯಂಡ ದಿನು, ಪಟ್ಟಮಾಡ ಕುಶ, ಪುಲ್ಲೇರ ಕಾಳಪ್ಪ, ಕಿರಿಯಮಾಡ ಶರೀನ್, ಮಂದಪAಡ ಮನೋಜ್, ಚೀಯಬೇರ ಸತೀಶ್, ಮೇದೂರ ಕಂಠಿ, ಕೂಪದೀರ ಸಾಬು, ನಂದಿನೆರ ವಂಡ ಅಪ್ಪಯ್ಯ, ನಂದಿನೆರವAಡ ಅಯ್ಯಣ್ಣ, ಮಣುವಟ್ಟಿರ ಚಿಣ್ಣಪ್ಪ, ಪುಟ್ಟಿಚಂಡ ದೇವಯ್ಯ ಹಾಜರಿದ್ದರು.