ಸೋಮವಾರಪೇಟೆ, ಅ.೩: ತಾಲೂಕು ಆಡಳಿತದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟçಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ತಾಲೂಕು ತಹಶೀಲ್ದಾರ್ ನರಗುಂದ್ ಅವರು ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಮಾತನಾಡಿದ ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ಸ್ಮರಣೆ ಅಗತ್ಯ. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದಿಂದ ಸ್ವಾತಂತ್ರ‍್ಯ ಲಭಿಸಿದೆ. ಅವರ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ದೇಶ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಚೆಟ್ಟಳ್ಳಿ : ಲಾಲ್ ಬಹದ್ದೂರ್ ಶಾಸ್ತಿç ಹಾಗೂ ಗಾಂಧಿ ಜಯಂತಿ ಆಚರಣೆ ಅಂಗವಾಗಿ ಕಾಫಿ ಬೋರ್ಡ್ ಚೇರಳ ಭಗವತಿ ದೇವಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿಯ ಚೆಟ್ಟಳ್ಳಿ ಶಕ್ತಿ ಕೇಂದ್ರದ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು.ಪೆರಾಜೆ: ಗ್ರಾಮ ಪಂಚಾಯಿತಿ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ವಿಶೇಷ ಗ್ರಾಮ ಸಭೆ ಮತ್ತು ಸ್ವಚ್ಛತಾ ಹೀ ಸಪ್ತಾಹ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು, ಅಲ್ಲದೇ ಮಡಿಕೇರಿ ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು,
ನಂತರ ಪಂಚಾಯತ್ ಕಟ್ಟಡದ ಸುತ್ತ ಮುತ್ತ ಮತ್ತು ಕಾಸ್ಪಾಡಿ ಜಂಕ್ಷನ್‌ನಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಸುಂಟಿಕೊಪ್ಪ: ಇಲ್ಲಿನ ಪದವಿ ಪೂರ್ವ ಕಾಲೇಜಿನಲ್ಲಿ ಲಾಲ್ ಬಹದ್ದೂರ್À ಶಾಸ್ತಿç ಹಾಗೂ ಮಹಾತ್ಮ ಗಾಂಧಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ.ಎಸ್. ಜಾನ್ ವಹಿಸಿ ಮಾತನಾಡಿ ರಾಷ್ಟçಪಿತ ಮಹಾತ್ಮ ಗಾಂಧಿ ಅಹಿಂಸೆಯ ಪ್ರತಿಪಾದಕರಾಗಿದ್ದರು. ಸತ್ಯ ಅವರ ಮಂತ್ರವಾಗಿತ್ತು. ಶಾಂತಿ ಅವರ ಧ್ಯೇಯವಾಗಿತ್ತು ಅಹಿಂಸೆಯೇ ಅವರ ದೊಡ್ಡ ಅಸ್ತçವಾಗಿತ್ತು ಎಂದರು. ಹಾಗೆಯೇ ಲಾಲ್ ಬಹದ್ದೂರ್À ಶಾಸ್ತಿç ಅವರು ಒಬ್ಬ ಆದರ್ಶ ಪ್ರಧಾನಿಯಾಗಿದ್ದರು. ಅವರ ಜೀವನ ಸಂದೇಶವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಈಶ, ಸರಳ ಸುನೀತ, ಕವಿತಾಭಕ್ತ್, ಸುಚಿತ್ರಾ, ಕವಿತಾ, ಕನಕ, ಸಂಧ್ಯಾ ಹಾಜರಿದ್ದರು.