ಮಡಿಕೇರಿ, ಅ. ೩: ಪ್ರತಿಯೊಬ್ಬರೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಿಡ - ಮರ, ಪ್ರಾಣಿ - ಪಕ್ಷಿಗಳು ಸೇರಿದಂತೆ ವನ್ಯಜೀವಿ ಹಾಗೂ ವನ ಸಂಪತ್ತನ್ನು ಉಳಿಸಿ ಬೆಳೆಸಿದರೆ ಮಾತ್ರ ಮಾನವನ ಉಳಿವು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಹೇಳಿದರು.

ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಯ ಅರಣ್ಯ ಭವನದ ಬಳಿ ಕೊಡಗು ಅರಣ್ಯ ವೃತ್ತ, ಮಡಿಕೇರಿ ವನ್ಯಜೀವಿ ವಿಭಾಗ, ಶಿಕ್ಷಣ ಇಲಾಖೆಯ ರಾಷ್ಟಿçÃಯ ಹಸಿರು ಪಡೆ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ "ಸುಸ್ಥಿರ ಪರಿಸರಕ್ಕಾಗಿ ಪ್ರಮುಖ ಜೀವಿಗಳ ಪುನರುತ್ಥಾನ" ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡಿದ್ದ ೬೮ ನೇ ವನ್ಯಜೀವಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವನು ಸೇವಿಸುವ ಶುದ್ಧ ಆಮ್ಲಜನಕವನ್ನು ಪೂರೈಸುವ ಗಿಡ - ಮರಗಳು ಹಾಗೂ ಸುಂದರ ಪರಿಸರದ ಸಂರಕ್ಷಣೆ ಪ್ರತಿಯೊಬ್ಬರದ್ದಾಗಬೇಕು ಎಂದು ಕರೆಕೊಟ್ಟರು.

ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್. ನಿರಂಜನ್ ಮೂರ್ತಿ ಮಾತನಾಡಿ, ಗಾಂಧಿ ಜಯಂತಿಯAದೇ ವನ್ಯಜೀವಿ ಸಪ್ತಾಹವೂ ಇದೆ. ಅಲ್ಲದೇ ದಸರಾ ಹಬ್ಬವೂ ನಾಡಿನಾದ್ಯಂತ ಆಚರಣೆಯಲ್ಲಿ ರುವ ಕಾರಣ ಈ ವನ್ಯಜೀವಿ ಸಪ್ತಾಹ ಜನೋತ್ಸವವಾಗಬೇಕು. ಆ ಮೂಲಕ ಜನರಲ್ಲಿ ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಬೇಕು ಎಂದು ಹೇಳಿದರು.

ಕರಾವಿಪ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಪರಿಸರ ಸಂರಕ್ಷಣೆ, ಗಿಡ-ಮರಗಳ ನೆಟ್ಟು ಬೆಳೆಸುವ ಹಾಗೂ ವನ್ಯ ಮೃಗಗಳನ್ನು ಸಂರಕ್ಷಣೆ ಬಗ್ಗೆ ಮಾತನಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಶಿವರಾಂ ಬಾಬು, ಎ.ಟಿ.ಪೂವಯ್ಯ, ಎಸಿಎಫ್‌ಗಳಾದ ಶ್ರೀನಿವಾಸ ನಾಯಕ್, ಮೊಹಿಸಿನ್ ಪಾಷಾ, ಎ.ಎ. ಗೋಪಾಲ್, ವನ್ಯಜೀವಿ ವಲಯದ ಅರಣ್ಯಾಧಿಕಾರಿ ವಿಮಲ್ ಬಾಬು, ಭಾಗಮಂಡಲ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ, ಕೊಟ್ರೇಶ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಂ, ಸಂಪಾಜೆ ವಲಯದ ಮಧುಸೂದನ್, ಶ್ರೀಮಂಗಲ ವಲಯದ ದಿನ್ಸಿ ದೇಚಮ್ಮ, ಪುಷ್ಪಗಿರಿ ಉಪವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ, ಗಣೇಶ್, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ಅಂಬೇಕಲ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ, ಕರಾವಿಪ ಪದಾಧಿಕಾರಿಗಳಾದ ಎಂ.ಎನ್. ವೆಂಕಟನಾಯಕ್, ಟಿ.ವಿ. ಶೈಲಾ, ಸಿ.ಡಿ. ಲೋಕೇಶ್ ಮೊದಲಾದವರಿದ್ದರು.

ಮಡಿಕೇರಿ ನಗರದ ಅರಣ್ಯ ಭವನ ಆವರಣದಿಂದ ಆರಂಭಗೊAಡ ಪರಿಸರ ಜಾಥಾವು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಗಾಂಧಿ ಮಂಟಪಕ್ಕೆ ತೆರಳಿ ನಂತರ ನಗರದ ಮಹದೇವಪೇಟೆ ಮೂಲಕ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಸಮಾಪನ ಗೊಂಡಿತು.

ಪರಿಸರ ನಡಿಗೆ

'ವಾಕಥಾನ್' ಜಾಥಾದಲ್ಲಿ ಸಾಗಿದ ಅಧಿಕಾರಿಗಳು, ಅರಣ್ಯ ರಕ್ಷಕರು, ಸ್ವಯಂ ಸೇವಕರು ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಘೋಷಣೆಗಳನ್ನು ಕೂಗಿದರು.

ಹಸಿರೇ ಉಸಿರು, ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹುಲಿ ಸಂರಕ್ಷಿಸಿ, ಕಾಡೇ ರಾಷ್ಟçದ ಸಂಪತ್ತು, ಕಾಡು ಬೆಳೆಸಿ ತಾಪ ಇಳಿಸಿ ಇತ್ಯಾದಿ ಘೋಷಣೆಗಳನ್ನು ಕೂಗಿದರು.