ಮಡಿಕೇರಿ, ಅ. ೩: ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ ೬.೩೦ಕ್ಕೆ ಆಯುಧಪೂಜೆ ಅಂಗವಾಗಿ ಹೇಮಂತ್-ಹೇರAಭ ಸಹೋದರರಿಂದ ವೇಣುವಾದನ, ನೃತ್ಯ ಲಹರಿ ನೃತ್ಯಾಲಯ ಮಂಗಳೂರು ಇವರಿಂದ ಪುಣ್ಯಕೋಟಿ ನೃತ್ಯರೂಪಕ, ಅಭಿನಯ ಕಲಾಮಿಲನ ತಂಡ ಭಾಗಮಂಡಲ ಇವರಿಂದ ನೃತ್ಯ ವೈವಿಧ್ಯ, ನಾಟ್ಯನಿಕೇತನ ಸಂಗೀತ ನೃತ್ಯ ಶಾಲೆ ಮಡಿಕೇರಿ ಇವರಿಂದ ಸಾಂಸ್ಕೃತಿಕ ವೈವಿಧ್ಯ, ರಿಧಂ ಮೇರ‍್ಸ್ ಮೈಸೂರು ಅವರಿಂದ ಸಂಗೀತ ರಸಮಂಜರಿ, ಕಂಚಿ ಕಾಮಾಕ್ಷಿ ಮಹಿಳಾ ಸಂಘ ಗೌಳಿಬೀದಿ ಮಡಿಕೇರಿ ಇವರಿಂದ ತಿರುವಾದಿರ ಕಳಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ಕೊಡಗಿನ ರಾಹುಲ್ ರಾವ್ ಅವರಿಂದ ನೃತ್ಯ ನೆರವೇರಲಿದೆ.