ಮಡಿಕೇರಿ, ಅ. ೨: ಮಡಿಕೇರಿಯ ಶ್ರೀ ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘದಿAದ ಕೈಲ್‌ಪೊಳ್ದ್ ಸಂತೋಷಕೂಟ ಕಾರ್ಯಕ್ರಮ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುಂಡAಡ ಬಿ. ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿತು. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಪೂವಪ್ಪ ನೇತೃತ್ವದಲ್ಲಿ ಆಯುಧ ಪೂಜೆ ನೆರವೇರಿಸಿ ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು.
ಸಭಾ ಕಾರ್ಯಕ್ರಮ ಮುಂಡAಡ ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಅಲೆಮಡ ಚಿತ್ರಾ ನಂಜಪ್ಪ ಪ್ರಾರ್ಥಿಸಿ, ಅಧ್ಯಕ್ಷರು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ನಂದಿನೆರವAಡ ಪಿ. ಚೀಯಣ್ಣ ಮತ್ತು ಸಂಘದ ನಿರ್ದೇಶಕರಾದ ಮಣವಟ್ಟಿರ ಸುಜಿತ್ ಚಿಣ್ಣಪ್ಪ ಮಹಾಸಭೆ ನಡಾವಳಿಕೆ ಮತ್ತು ಲೆಕ್ಕಪತ್ರವನ್ನು ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.
ಮಡಿಕೇರಿ ಕೊಡವ ಸಮಾಜದ ನೂತನ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಮತ್ತು ಹಾಲಿ ಭಗಂಡೇಶ್ವರ ಸಂಘದ ಕಾರ್ಯದರ್ಶಿ ಮಡಿಕೇರಿ ಕೊಡವ ಸಮಾಜದ ನೂತನ ಉಪಾಧ್ಯಕ್ಷ ನಂದಿನೆರವAಡ ಪಿ. ಚೀಯಣ್ಣ ಅವರನ್ನು ಸನ್ಮಾನಿಸ ಲಾಯಿತು. ಆಟೋಟ ಸ್ಪರ್ಧೆಯಲ್ಲಿ ಬಹುಮಾನವನ್ನು ಮತ್ತು ಸಂಘದ ಸದಸ್ಯರ ಎಸ್.ಎಸ್. ಎಲ್.ಸಿ. ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಘದ ಕಾರ್ಯದರ್ಶಿ ನಂದಿನೆರವAಡ ಪಿ. ಚೀಯಣ್ಣ ವಂದಿಸಿದರು. ರಾಷ್ಟçಗೀತೆ ಯೊಂದಿಗೆ ಸಭೆ ಮುಕ್ತಾಯ ವಾಯಿತು. ವಾಲಗತಾಟ್ ಸೇರಿದಂತೆ ಇತರ ಕಾರ್ಯಕ್ರಮಗಳು ನಡೆಯಿತು. ಮುಂಡAಡ ಸೋಮಣ್ಣ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.