ಮಡಿಕೇರಿ, ಅ. ೨: ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದ ವತಿಯಿಂದ ಕೈಲ್‌ಪೊಳ್ದ್ ಸಂತೋಷ ಕೂಟ ಸಂಭ್ರಮದಿAದ ನಡೆಯಿತು.

ಸಮಾಜದ ಅಧ್ಯಕ್ಷ ಬಾಚರಣಿಯಂಡ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಚಾಮೆರ ಪವನ್ ದೇವಯ್ಯ, ಪಟ್ರಮಾಡ ಸುಜಿ ಬೆಳ್ಯಪ್ಪ, ಐವತೊಕ್ಲು ಗ್ರಾಮದ ಕಾಫಿ ಬೆಳೆಗಾರ ತೇಲಪಂಡ ಪ್ರದೀಪ್ ಪೂವಯ್ಯ ಹಾಗೂ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಕೊಳಗದಾಳು ಗ್ರಾಮದ ಅಯ್ಯಂಡ ಅಯ್ಯಪ್ಪ ಉಪಸ್ಥಿತರಿದ್ದರು.

ಪಟ್ರಮಾಡ ವರ್ಣಿಕ ಪೊನ್ನಮ್ಮ ಪ್ರಾರ್ಥಿಸಿದರು. ಉಪಾಧ್ಯಕ್ಷ ಕೇಕಡ ರೋಮಿ ಮೊಣ್ಣಪ್ಪ ಸ್ವಾಗತಿಸಿದರು. ಅಧ್ಯಕ್ಷ ಬಾಚರಣಿಯಂಡ ಗಣಪತಿ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ತೇಲಪಂಡ ಲಕ್ಷಿö್ಮ ಪೆಮ್ಮಯ್ಯ ಸರ್ವರನ್ನು ವಂದಿಸಿದರು. ಸಮಾಜದ ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಆಯುಧಗಳಿಗೆ ಪೂಜೆ ಸಲ್ಲಿಸಲಾಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮರ್ಚೆಂಟ್ ನೇವಿಯ ನಿರ್ದೇಶಕ ಪಟ್ರಮಾಡ ಸುಜಿ ಬೆಳ್ಯಪ್ಪ ತೆಂಗಿನಕಾಯಿಗೆ ಗುಂಡು ಗೊಡೆಯುವ ಮೂಲಕ ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸಿದರು.

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ವಿವಿಧÀ ಸ್ಪರ್ಧೆಗಳಲ್ಲಿ ಸದಸ್ಯರು ಪಾಲ್ಗೊಂಡು ಸಂಭ್ರಮಿಸಿದರು.