ಮಡಿಕೇರಿ, ಅ. ೨: ನಂ. ೨೮೦೩ ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾ ಸಭೆ ಕುಟ್ಟ ಕೊಡವ ಸಮಾಜ ಸಂಘದ ಅಧ್ಯಕ್ಷ ಮಚ್ಚಮಾಡ ಬಿ. ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಬೆಳೆಯಬೇಕಾದರೆ ಪ್ರತಿಯೊಬ್ಬ ಸದಸ್ಯರು ಎಲ್ಲಾ ವ್ಯವಹಾರ ಗಳನ್ನು ಸಂಘದಲ್ಲಿ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಸಂಘದಲ್ಲಿ ಸದಸ್ಯರ ಹಾಗೂ ಸದಸ್ಯರೇತರಿಗೆ ಅನುಕೂಲ ವಾಗುವಂತೆ ರಸಗೊಬ್ಬರ, ಕ್ರಿಮಿನಾಶಕ, ವ್ವವಸಾಯ ಸಾಮಗ್ರಿ, ಕೋವಿ ಮತ್ತು ಹೊಸದಾಗಿ ಸಿಮೆಂಟ್ ಹಾಗೂ ಹಾರ್ಡ್ವೇರ್ ಸಲಕರಣಿ ವ್ಯಾಪಾರ ನಡೆಸಲಾಗುತ್ತಿದೆ. ಅಲ್ಲದೆ ಸದಸ್ಯರಿಗೆ ಹಾಗೂ ಸದಸ್ಯರೇತರಿಗೆ ಆರ್.ಟಿ.ಸಿ., ಇ.ಸಿ., ಎಂ.ಸಿ, ಪಡಿತರ ಚೀಟಿ, ಎಲ್ಲಾ ತರಹದ ವಿಮೆ ನವೀಕರಣ, ಪಾಸ್‌ಪೋರ್ಟ್ ಸರ್ವಿಸ್, ಪ್ಯಾನ್ ಕಾರ್ಡ್ ಸರ್ವಿಸ್, ರೈಲು ಮತ್ತು ವಿಮಾನ ಟಿಕೇಟ್ ಬುಕ್ಕಿಂಗ್ ಅಲ್ಲದೆ ಕಾಫಿ ಔಟರ್ನ್ ಮತ್ತು ತೇವಾಂಶ ಪರೀಕ್ಷೆ ಸೌಲಭ್ಯ ಒದಗಿಸಿಕೊಡಲಾಗಿದೆ ಎಂದು ಸುಬ್ರಮಣಿ ಅವರು ಮಾಹಿತಿಯಿತ್ತರು.
ಸಂಘದಲ್ಲಿ ೧೫೯೧ ಸದಸ್ಯರಿದ್ದು ರೂ. ೧೨೫.೫೨ ಲಕ್ಷ ಪಾಲು ಬಂಡವಾಳ, ರೂ. ೧೩೨೮.೯೮ ಲಕ್ಷ ವಿವಿಧ ರೀತಿಯ ಠೇವಣಿ ಹೊಂದಿದ್ದು,ರೂ. ೧೮೫೩.೯೬ ಲಕ್ಷಗಳ ವಿವಿಧ ರೀತಿಯ ಸಾಲ ವಿತರಿಸಲಾಗಿದ್ದು, ಸಂಘವು ೨೦೨೧-೨೨ನೇ ಸಾಲಿನಲ್ಲಿ ರೂ. ೪೯.೩೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದರು.
ಈ ಸಂದರ್ಭ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸದಸ್ಯರುಗಳು ಮುಂದಿನ ವರ್ಷಗಳಲ್ಲಿ ಸಂಘವು ಇನ್ನು ಹೆಚ್ಚಿನ ಅಭಿವೃಧಿ ಹೊಂದುವ ಸಲುವಾಗಿ ಸೂಕ್ತ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ, ನಿರ್ದೇಶಕರುಗಳಾದ ಹೊಟ್ಟೇಂಗಡ ರಮೇಶ್, ಅಜ್ಜಿಕುಟೀರ ದಿನೇಶ್, ಬೊಜ್ಜಂಗಡ ಸೋಮಯ್ಯ, ಚೆಪ್ಪಡೀರ ಪಾರ್ಥ, ದುಗ್ಗಂಡ ರವಿ, ಜೆ.ಎಂ. ರಾಜ, ತೀತಿರ ರುಕ್ಮಣಿ, ಕೋಟ್ರಮಾಡ ನಳಿನಿ, ಬಿ.ಎ. ಮಂಜುಳ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮೇಲ್ವಿಚಾರಕಿ ಬಿ.ವಿ. ಭಾರತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಬೇಬಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.