*ಗೋಣಿಕೊಪ್ಪ, ಅ. ೩: ವಾಹನ ಚಾಲಕರ ಸಂಘ ಮತ್ತು ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ತಾ. ೪ ರಂದು (ಇಂದು) ಆಯುಧ ಪೂಜೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ ಮಾಹಿತಿ ನೀಡಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಬೆಳಿಗ್ಗೆ ೭ ಮತ್ತು ಸಂಜೆ ಏಳು ಗಂಟೆಗೆ ನಡೆಯಲಿದೆ.
ಶ್ರೀ ಕಾವೇರಿ ಕಲಾವೇದಿಕೆಯಲ್ಲಿ ಸಂಜೆ ಬೆಂಗಳೂರಿನ ಮಧುರ ಮ್ಯೂಸಿಕ್ ತಂಡದಿAದ ಸಂಗೀತ ರಸಸಂಜೆ ನಡೆಯಲಿದ್ದು, ಖಾಸಗಿ ವಾಹಿನಿಯ ಗಾನಕೋಗಿಲೆ ಮತ್ತು ಡಾನ್ಸಿಂಗ್ ಸ್ಟಾರ್ ಕಲಾವಿದರು ಭಾಗವಹಿಸಲಿದ್ದಾರೆ.
ಬೆಳಿಗ್ಗೆ ೯ ಗಂಟೆಯಿAದ ರಾತ್ರಿ ೧೧ ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ ಎಂದು ತಿಳಿಸಿದ ಅವರು, ೧೦ ಗಂಟೆಗೆ ಬಸ್ ನಿಲ್ದಾಣದಲ್ಲಿ ಗ್ರೀಸ್ ಕಂಬ ಇರುವ ಸ್ಪರ್ಧೆ ಏರ್ಪಡಿಸಲಾಗಿದ್ದು, ನಂತರ ಮಧ್ಯಾಹ್ನ ೧೨ ಗಂಟೆಗೆ ನಾಗರ ಹೊಳೆಯ ಬುಡಕಟ್ಟು ಸಮುದಾಯ ತಂಡದ ಅಮ್ಮಾಳಮ್ಮ ತಂಡದವರಿAದ ಬುಡಕಟ್ಟು ಸಾಂಸ್ಕöÈತಿಕ ನೃತ್ಯಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.ಈ ಸಂದರ್ಭ ಆಟೋ ಚಾಲಕರ ಸಂಘದ ಅಧಕ್ಷ ಜಿಮ್ಮ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಕೆ.ವಿ. ಸುರೇಶ್, ವಾಹನ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಕೃಷ್ಣೆಗೌಡ, ರೇಣುಕುಮಾರ್ ಇದ್ದರು.