ಗೋಣಿಕೊಪ್ಪಲು, ಅ.೧: ಗ್ರಾಮೀಣ ಕ್ರೀಡೆಗಳು ಹೆಚ್ಚಾಗಿ ನಡೆಯುವಂತಾಗಲಿ, ಪ್ರತಿಭೆಗಳಿಗೆ ಅವಕಾಶಗಳು ಸಿಗಲಿ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ. ಸತೀಶ ಹೇಳಿದರು. ಗೋಣಿಕೊಪ್ಪಲುವಿನ ಶಿವಾಜಿ ಯುವ ಸೇನೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಕ್ರೀಡೆಯಲ್ಲಿ ಯುವಕ ಯುವತಿಯರು ಹೆಚ್ಚಾಗಿ ಪಾಲ್ಗೊಳ್ಳುವುದರಿಂದ ದೈಹಿಕವಾಗಿ ಸದೃಢರಾಗಬಹುದು ಎಂದರು.
ಶಿವಾಜಿ ಸೇನೆಯ ಅಧ್ಯಕ್ಷರಾಗಿರುವ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್, ತಾಲೂಕು ತಹಶೀಲ್ದಾರ್ ಅರ್ಚನ ಕೆ.ಭಟ್, ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಚೈತ್ರ ಬಿ.ಚೇತನ್, ಸದಸ್ಯರಾದ ಪುಷ್ಪ, ವಿವೇಕ್ ರಾಯ್ಕರ್, ಸೇರಿದಂತೆ ಶಿವಾಜಿ ಯುವ ಸೇನೆಯ ಗೌರವ ಅಧ್ಯಕ್ಷರಾದ ಕೊಲ್ಲೀರ ಗಯಾ ಕಾವೇರಿಯಪ್ಪ, ಶಿವಾಜಿ ಸೇನೆಯ ಕಾರ್ಯಧ್ಯಕ್ಷರಾದ ಸಿಂಗಿ ಸತೀಶ್, ಖಜಾಂಜಿ ಸ್ವಾಮಿ, ಉಪಾಧ್ಯಕ್ಷರಾದ ಕಿಶೋರ್, ಜಂಟಿ ಕಾರ್ಯದರ್ಶಿ ವಿನೋದ್, ಸದಸ್ಯರಾದ ಯೋಗೇಶ್, ಅಕ್ಷಯ್, ವಿದ್ವಾನ್, ಸಿಜು, ಕಾನೂನು ಸಲಹೆಗಾರರಾದ ಪ್ರದೀಪ್ ಕುಮಾರ್, ಎಂ.ಕೆ.ಸನತ್ ಕುಮಾರ್, ಬಿ.ಟಿ ಗಣೇಶ್ ರೈ, ಎಂ.ಎನ್.ಯೋಗೇಶ್, ಎಂ.ಎA.ನಾಗೇಶ್, ದಾನಿಗಳಾದ ಚಂದನ್ ಕಾಮತ್, ಕಾಂತರಾಜ್, ಇಟ್ಟಿರ ಬಿದ್ದಪ್ಪ, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.
ಪಂದ್ಯಾಟದಲ್ಲಿ ವಿ ಸೆವೆನ್ ತಂಡವು ವೀರಾಜಪೇಟೆ ಫ್ರೆಂಡ್ಸ್ ವಿರುದ್ದ ಜಯ ಗಳಿಸಿತು. ಬೋಯಿಕೇರಿ ತಂಡವು ಕೈಕೇರಿ ಪವನ್ ಫ್ರೆಂಡ್ಸ್ ವಿರುದ್ದ, ಪೊನ್ನಂಪೇಟೆ ಎಸ್ವೈಸಿ ತಂಡವು ತಿತಿಮತಿ ಸ್ಟಾರ್ ವಿರುದ್ಧ ಜಯಿಸಿತು. ಸಿದ್ದಾಪುರ ಎಚ್. ಎಫ್ಸಿ ತಂಡವು ಶಿವಾಜಿ ಸೇನೆ ತಂಡವನ್ನು ಮಣಿಸಿತು. ವೀರಾಜಪೇಟೆ (ಎ) ತಂಡವು ಗೋಣಿಕೊಪ್ಪ ಫಸ್ಟ್ ಬ್ಲಾಕ್ ತಂಡವನ್ನು ಸೋಲಿಸಿತು. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.