*ಗೋಣಿಕೊಪ್ಪ, ಅ. ೧: ಶ್ರೀ ಕಾವೇರಿ ದಸರಾ ಸಮಿತಿಯ ಸಾಂಸ್ಕöÈತಿಕ ವೇದಿಕೆಯಲ್ಲಿ ರಿಫ್ಲೆಕ್ಷನ್ ಡ್ಯಾನ್ಸ್ ತಂಡ ನಡೆಸಿದ ಚಲನ ಚಿತ್ರ, ಭಕ್ತಿಗೀತೆ ನೃತ್ಯ, ವಿ.ಟಿ. ಶ್ರೀನಿವಾಸ್ ಇವರಿಂದ ವಾದ್ಯ ಸಂಗೀತ, ದೇಶಭಕ್ತಿ ಗೀತೆಗಳು, ಶಂಕ್ರಯ್ಯ ಅವರಿಂದ ಸುಗಮ ಸಂಗೀತ, ವೀರಾಜಪೇಟೆಯ ಜಗನ್ಮೋಹನ ನಾಟ್ಯಾಲಯದಿಂದ ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು.
೪೪ನೇ ವರ್ಷದ ನಾಡಹಬ್ಬ ದಸರಾ ಉತ್ಸವದ ೫ನೇ ದಿನದ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಕಾವೇರಿ ಕಲಾ ವೇದಿಕೆಯಲ್ಲಿ ಎಂ.ಎಲ್.ಸಿ. ಅಡಗೂರು ವಿಶ್ವನಾಥ್ ಚಾಲನೆ ನೀಡಿದರು. ಜಾನಪದ ಗೀತೆಯನ್ನು ಹಾಡಿದರು.
ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ಕನ್ನಡ ಜಾನಪದ ಪರಿಷತ್ನ ಅಧ್ಯಕ್ಷೆ ಡಾ. ಎನ್.ಪಿ. ಕಾವೇರಿ ಪ್ರಕಾಶ್ ಮಾತನಾಡಿದರು.
ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ಹೊಸೂರು ಗ್ರಾ.ಪಂ. ಅಧ್ಯಕ್ಷೆ ಪಂದ್ಯAಡ ಶಾಂತಿ, ಕೊಡಗು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಅಮೃತರಾಜ, ಪ್ರಗತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎನ್. ಪ್ರಕಾಶ್, ಗ್ರಾ.ಪಂ. ಸದಸ್ಯೆ ಸೌಮ್ಯ ಬಾಲು, ದಸರಾ ಸಮಿತಿ ಖಜಾಂಜಿ ಗಾಂಧಿ ದೇವಯ್ಯ, ಸವಿತಾ ಸಮಾಜದ ಅಧ್ಯಕ್ಷ ವೇದಪಂಡ ಬಿದ್ದಪ್ಪ, ಕೊಡವ ಸಮಾಜ ನಿರ್ದೇಶಕಿ ಮೂಕಳೇರ ಕಾವ್ಯ ಮಧು, ಬಿಳಿಮೊಗ್ಗ ಸಂಘದ ಅಧ್ಯಕ್ಷ ಅನಿಲ್ಕುಮಾರ್, ಕಾವೇರಿ ದಸರಾ ಸಮಿತಿ ಸದಸ್ಯ ಜಮ್ಮಡ ಕೆ. ಸೋಮಣ್ಣ, ಕಾವೇರಿ ಮಹಿಳಾ ಸಮಾಜದ ಅಧ್ಯಕ್ಷ ಕಟ್ಟೇರ ಉತ್ತರೆ ಅಪ್ಪಚ್ಚು ಉಪಸ್ಥಿತರಿದ್ದರು.
ಇಂದಿನ ಕಾರ್ಯಕ್ರಮ : ಬೆಳಿಗ್ಗೆ ೭ ಹಾಗೂ ಸಂಜೆ ೭ ಗಂಟೆಗೆ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ.
ಸಂಜೆ ೬ ಗಂಟೆಯಿAದ ೭ ಗಂಟೆಯವರೆಗೆ ಚಂದ್ರಶೇಖರ್ ಮತ್ತು ಕಲಾತಂಡದಿAದ ಸಂಗೀತ, ನಂತರ ೮ ಗಂಟೆಯವರೆಗೆ ವೀರಾಜಪೇಟೆ ನಾಟ್ಯಮಯೂರಿ ನೃತ್ಯ ಶಾಲೆಯಿಂದ ಭರತ ನಾಟ್ಯ, ಇಂಟೋಫೀಸ್ ಶಾಲೆಯಿಂದ ನೃತ್ಯ, ರಾತ್ರಿ ೮:೪೫ಕ್ಕೆ ಯುವ ದಸರಾ, ಫ್ಯಾಷನ್ ಶೋ, ಡಿಜೆ ನೈಟ್ ನಡೆಯಲಿದೆ.