ಗೋಣಿಕೊಪ್ಪಲು, ಸೆ. ೩೦: ನಗರದ ಶಿವಾಜಿ ಯುವ ಸೇನೆ ವತಿಯಿಂದ ಅ. ೧ ಹಾಗೂ ೨ ರಂದು ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ಕಬಡ್ಡಿ ನಡೆಯಲಿದೆ. ರಾಜ್ಯದ ವಿವಿಧ ಭಾಗದಿಂದ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ.
ಕ್ರೀಡೆಯ ಯಶಸ್ವಿಗೆ ಕಾವೇರಿ ದಸರಾ ಸಮಿತಿಯು ಕೈ ಜೋಡಿಸಿದೆ. ಈಗಾಗಲೇ ಕಬಡ್ಡಿ ಪಂದ್ಯಾಟಕ್ಕೆ ಸಿದ್ಧತೆಗಳು ಆರಂಭವಾಗಿವೆ. ನಗರದ ಗ್ರಾಮ ದೇವತೆ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಪಂದ್ಯಾಟದ ಪ್ರಯುಕ್ತ ಪೂಜೆ ನೆರವೇರಿಸಿ ನಂತರ ಜರ್ಸಿಯನ್ನು ಬಿಡುಗಡೆ ಗೊಳಿಸಲಾಯಿತು. ಎರಡು ದಿನಗಳ ಕಾಲ ನಡೆಯುವ ಕ್ರೀಡೆಯಲ್ಲಿ ಹಲವು ಸಾಧಕರನ್ನು ಗುರುತಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜರ್ಸಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಶಿವಾಜಿ ಸೇನೆಯ ಅಧ್ಯಕ್ಷ ಅಣ್ಣಪ್ಪ, ಕಾರ್ಯಾಧ್ಯಕ್ಷ ಸಿಂಗಿ ಸತೀಶ್, ಖಜಾಂಚಿ ಸ್ವಾಮಿ, ಉಪಾಧ್ಯಕ್ಷ ಕಿಶೋರ್, ಜಂಟಿ ಕಾರ್ಯದರ್ಶಿ ವಿನೋದ್, ಸದಸ್ಯರಾದ ಯೋಗೇಶ್, ಅಕ್ಷಯ್, ವಿದ್ವಾನ್, ಸಿಜು, ಎಂ.ಕೆ. ಸನತ್ ಕುಮಾರ್, ಬಿ.ಟಿ. ಗಣೇಶ್ ರೈ, ಎಂ.ಎನ್. ಯೋಗೇಶ್, ಕಾನೂನು ಸಲಹೆಗಾರ ಪ್ರದೀಪ್ ಕುಮಾರ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.