ವೀರಾಜಪೇಟೆ, ಸೆ. ೩೦: ಕೊಡಗು ಭಾಲಾವಲೀಕಾರ್ ಉತ್ತಮ ಜೀವನ ಸಹಕಾರ ಸಂಘ ಹಾಗೂ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ಪುತ್ತೂರು ಸಂಘದ ಶತಮಾನೋತ್ಸವದ ಪ್ರಯುಕ್ತ ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸಭಾ ಭವನದಲ್ಲಿ ಸಮ್ಮಿಲನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಪುತ್ತೂರು ಸಂಘದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಎಸ್.ಆರ್. ಸತೀಶ್ಚಂದ್ರ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿ ಭಾರತವು ಇಂದು ವಿಶ್ವ ಗುರುವಾಗಿದೆ. ವೈವಿಧ್ಯತೆಯಲ್ಲಿ ಏಕತೆಯು ನಮ್ಮ ರಾಷ್ಟçದ ಪ್ರಧಾನ ಅಂಶವಾಗಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟರೆ ಮಾತ್ರ ಬಲಿಷ್ಠ ರಾಷ್ಟçವನ್ನು ನಿರ್ಮಿಸಬಹು ದೆಂದರು. ಇಂದು ಭಾಲಾವಲೀಕಾರ್ ಸಮಾಜವು ಎಲ್ಲಾ ಹಂತಗಳಲ್ಲೂ ಗುರುತಿಸಲ್ಪಟ್ಟಿರುವುದು ಗಮನಾರ್ಹ ವಿಚಾರ ಎಂದರು.
ಇದಕ್ಕೆ ಮುಖ್ಯ ಕಾರಣವೇ ಸಮಾಜದ ಸಂಘಟನೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಸ್ಥಿತ ರಿದ್ದ ಮತ್ತೋರ್ವ ಅತಿಥಿಗಳಾದ ಪುತ್ತೂರು ಭಾಲಾವಲೀಕಾರ್ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯಕ್ ಅವರು ಮಾತನಾಡಿ ಸಂಘದ ಏಳಿಗೆಗೆ ಸರ್ವರು ಶ್ರಮಿಸಬೇಕೆಂದು ತಿಳಿಸಿದರು.
ಅತಿಥಿಗಳಾದ ಪುತ್ತೂರು ಭಾಲಾವಲೀಕಾರ್ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಶುಭಕರ ರಾವ್ ಅವರು ಮಾತನಾಡಿ ಸಮಾಜವು ಹಂತ ಹಂತವಾಗಿ ಬೆಳವಣಿಗೆ ಆಗಿದ್ದು ಅಭಿವೃದ್ಧಿಗೆ ಮಾದರಿಯಾಗಿದೆ. ಅಂತೆಯೇ ಬಡವರಿಗೆ ನೆರವಾಗುವುದು ನಮ್ಮ ಸಮಾಜದ ಧ್ಯೇಯ ಎಂದರು.
ಸAಘವು ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು. ಕೊಡಗು ಭಾಲಾವಲೀಕಾರ್ ಸಂಘದ ಉಪಧ್ಯಕ್ಷ ಬಿ. ಆರ್. ವಾಸುದೇವ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಮಾಜ ಬಾಂಧವರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಂಸಾಳೆ, ನಾಟಕ, ನೃತ್ಯ, ಭರತನಾಟ್ಯ, ಹಾಡು, ಜಾನಪದ ನೃತ್ಯ, ಭಕ್ತ ಪ್ರಹ್ಲಾದ ಪ್ರಸಂಗಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳÀಲ್ಲಿ ಸಾಧನೆಗೈದ ಭವಾನಿಶಂಕರ್ ಬಿ.ವಿ, ನಂದ ಬಿ.ಜಿ, ಬಿ. ಎನ್. ಚಂಪಕ, ಶಾರದಾ. ಪಿ., ಸತ್ಯನಾರಾಯಣ ಎನ್.ಎಸ್., ಜನಾರ್ಧನ ಬಿ.ಆರ್. ಅವರುಗಳನ್ನು ಸನ್ಮಾನಿಸಲಾಯಿತು.
ಡಾಕ್ಟರೇಟ್ ಪದವಿ ಪಡೆದ ಸಮಾಜದ ಡಾ. ರಾಮಕೃಷ್ಣ ಬೋರ್ಕರ್ ಅವರನ್ನು ಸನ್ಮಾನಿಸ ಲಾಯಿತು. ಡಾ. ರಾಮಕೃಷ್ಣ ಬೋರ್ಕರ್ ಅವರು ಸ್ವಾಗತಿಸಿ, ಜ್ಯೋತಿ ಅವರು ನಿರೂಪಿಸಿ, ಶಾಂತಿಭೂಷಣ್ ಬೋರ್ಕರ್ ಅವರು ಸರ್ವರನ್ನು ವಂದಿಸಿದರು. ಕಾರ್ಯಕ್ರಮದಲ್ಲಿ ಪುತ್ತೂರು, ಸುಳ್ಯ, ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ಸಮಾಜದ ಪಧಾದಿಕಾರಿಗಳು, ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.