ಮಡಿಕೇರಿ, ಸೆ. ೩೦: ಯುವ ಕಲೋತ್ಸವ ಅಂಗವಾಗಿ ಮಡಿಕೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕರವಲೆ ಭಗವತಿ ದೇವಸ್ಥಾನದಿಂದ ಗಾಂಧಿ ಮೈದಾನದವರೆಗೆ ಬೈಕ್ ಜಾಥಾ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಗಾಂಧಿ ಮೈದಾನದ ಗಾಂಧಿ ಮಂಟಪದ ಎದುರು ಆರ್.ಸಿ. ಕಾರ್ ರೇಸ್ ನಡೆಯಲಿದೆ. ಸಂಜೆ ೩ ಗಂಟೆಯಿAದ ನೃತ್ಯ ಕಲೋತ್ಸವದೊಂದಿಗೆ ಹೆಸರಾಂತ ಗಾಯಕರಿಂದ ರ್ಯಾಂಪ್ ಮ್ಯೂಸಿಕ್ ಶೋ, ರ್ಯಾಂಪ್ ವಾಕ್, ಯೂತ್ ಐಕಾನ್ ಪ್ರಶಸ್ತಿ ಪ್ರದಾನ ಹಾಗೂ ವಾದ್ಯ ಮತ್ತು ಡಿ.ಜೆ. ಪ್ರದರ್ಶನ ನಡೆಯಲಿದೆ.
ಕೆ.ಜಿ.ಎಫ್. ಖ್ಯಾತಿಯ ವಸಿಷ್ಠ ಸಿಂಹ ಹಾಗೂ ತಾರಕ್ ಪೊನ್ನಪ್ಪ, ಕಿರಿಕ್ ಪಾರ್ಟಿ ಖ್ಯಾತಿಯ ಚಂದನ್ ಆಚಾರ್, ಯುವ ತಾರೆಯರಾದ ತೇಜಸ್ವಿನಿ ಶರ್ಮ, ಎನ್.ಸಿ. ಅಯ್ಯಪ್ಪ, ಅನು ಅಯ್ಯಪ್ಪ, ವೀಣಾ ಪೊನ್ನಪ್ಪ, ಪಾಯಲ್ ಚೆಂಗಪ್ಪ ಹಾಗೂ ತಪಸ್ವಿನಿ ಪೂಣಚ್ಚ ಭಾಗವಹಿಸಲಿದ್ದಾರೆ.