ಮಡಿಕೇರಿ, ಸೆ. ೩೦: ಮಡಿಕೇರಿ ದಸರಾ ಉತ್ಸವದಲ್ಲಿ ತಾ. ೨ ರಂದು ಭಾನುವಾರ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ಜಾನಪದ ದಸರಾ ಜರುಗಲಿದ್ದು, ವೈವಿಧ್ಯಮಯ ಜಾನಪದ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಜಾನಪದ ದಸರಾ ಸಂಚಾಲಕರು ಗಳಾದ ಅನಿಲ್ ಹೆಚ್. ಟಿ ಮತ್ತು ಮುನೀರ್ ಅಹ್ಮದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅಂದು ಬೆಳಿಗ್ಗೆ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಗಾಂಧಿ ಮಂಟಪದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಬಳಿಕ ಬೆಳಿಗ್ಗೆ ೧೦ ಗಂಟೆಗೆ ವಸ್ತು ಪ್ರದರ್ಶನ ಉದ್ಘಾಟನೆ, ಬೆಳಿಗ್ಗೆ ೧೦.೧೫ ಗಂಟೆಗೆ ಜಾನಪದ ದಸರಾ ಉದ್ಘಾಟನೆ ನಡೆಯಲಿದ್ದು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷರಾದ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಅವರು ಉದ್ಘಾಟಿಸಲಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಕರ್ನಾಟಕ ಜಾನಪದ ಪರಿಷತ್ನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್.ರಮೇಶ್, ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದಸರಾ ಸಮಿತಿ ಆಧ್ಯಕ್ಷ ನಂದಾ ಉತ್ತಪ್ಪ, ಕೋದಂಡರಾಮ ದಸರಾ ಸಮಿತಿ ಅಧ್ಯಕ್ಷ ತಿಮ್ಮಯ್ಯ, ಕೋಟೆ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ಬ್ರಿಜೇಶ್, ಕೋಟೆ ಗಣಪತಿ ದಸರಾ ಸಮತಿ ಅಧ್ಯಕ್ಷ ಚಂದ್ರ, ಕರವಲೆ ಭಗವತಿ ದಸರಾ ಸಮಿತಿ ಅಧ್ಯಕ್ಷ ನೀರಜ್ ಬೋಪಣ್ಣ, ಕೋಟೆ ಮಾರಿಯಮ್ಮ ಕರಗ ಸಮಿತಿಯ ಅನೀಶ್, ದಂಡಿನಮಾರಿಯಮ್ಮ ಕರಗ ಸಮಿತಿಯ ಉಮೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಉದ್ಘಾಟನೆಯ ಬಳಿಕ ಜಾನಪದ ಕ್ರೀಡೆಗಳನ್ನು ಜಿಲ್ಲಾಧಿಕಾರಿ ಬಿ.ಸಿ.ಸತೀಶ್ ಅವರು ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ ೧೧.೨೦ ಗಂಟೆಯಿAದ ವೇದಿಕೆಯಲ್ಲಿ ಜಾನಪದ ವೈವಿಧ್ಯ ಕಾರ್ಯಕ್ರಮಗಳು ಮೂಡಿ ಬರಲಿವೆ. ಜಾನಪದ ನೃತ್ಯ ಲಹರಿ ಕಲಾ ತಂಡದ ಜಾನಪದ ಹಾಡು. ಸೊಗಡು ಕಲಾ ತಂಡ ಮೂರ್ನಾಡು ಇವರಿಂದ ಹಾಡು. ಸಮೂಹ ಜಾನಪದ ನೃತ್ಯ, ಚಿತ್ರಾ ಆರ್ಯನ್ ಮತ್ತು ತಂಡ, ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ತಂಡ, ವೀಣಾ ಮತ್ತು ತಂಡದಿAದ ಸಮೂಹ ಜಾನಪದ ಗಾಯನ. ಶನಿವಾರಸಂತೆ ಜಾನಪದ ಪರಿಷತ್ ತಂಡ ನೃತ್ಯ ಮತ್ತು ಹಾಡು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಂಡಗಳಿAದ ನೃತ್ಯ. ಮಡಿಕೇರಿ ಜಾನಪದ ಪರಿಷತ್ ತಂಡದಿAದ ಜಾನಪದ ಹಾಡು. ಜಾನಪದ ಕಲಾವಿದರ ಬಳಗ ಕೊಡಗು ತಂಡದಿAದ ಹಾಡು.ಕಡಗದಾಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ಹಾಡು ಮತ್ತು ನೃತ್ಯ, ಚೇರಂಬಾಣೆ ಗೌಡ ಸಮಾಜದಿಂದ ಅರೆಭಾಷೆ ನೃತ್ಯ - ಜಾನಪದ ಹಾಡು. ಸೋಮವಾರಪೇಟೆ ಜಾನಪದ ಘಟಕದಿಂದ ಜಾನಪದ ಹಾಡು, ಜಾನಪದ ನೃತ್ಯ. ಸೋಮವಾರಪೇಟೆಯ ಸಂತ ಜೋಸೇಫರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ನೃತ್ಯ. ಕೊಡಗು ಮಹಿಳಾ ಬರಹಗಾರರ ಒಕ್ಕೂಟದಿಂದ ಜಾನಪದ ಹಾಡು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಡಿಕೇರಿ ತಾಲೂಕು ಜಾನಪದ ಅಧ್ಯಕ್ಷ ಅನಿಲ್ ಹೆಚ್.ಟಿ. ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ವಹಿಸಲಿದ್ದಾರೆ.
ಅತಿಥಿಗಳಾಗಿ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಎಸ್. ದೇವಯ್ಯ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಮೂಡಾ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಂ. ಅಯ್ಯಪ್ಪ, ನಗರ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಧನಂಜಯ್, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ, ನಗರಸಭಾ ಸದಸ್ಯರುಗಳಾದ ಚಂದ್ರಶೇಖರ್, ಅಮಿನ್ ಮೊಹಿಸಿನ್, ಪೇಟೆ ರಾಮಮಂದಿರ ದಸರಾ ಸಮಿತಿ ಅಧ್ಯಕ್ಷ ಸುರೇಶ್, ದೇಚೂರು ರಾಮ ಮಂದಿರ ದಸರಾ ಸಮಿತಿ ಅಧ್ಯಕ್ಷ ವೇಣು, ದಂಡಿನ ಮಾರಿಯಮ್ಮ ದಸರಾ ಸಮಿತಿ ಅಧ್ಯಕ್ಷ ಅಮನ್, ಚೌಡೇಶ್ವರಿ ದಸರಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ಕಂಚಿ ಕಾಮಾಕ್ಷಿ ದಸರಾ ಸಮಿತಿ ಅಧ್ಯಕ್ಷ ರಾಘವ, ಕುಂದುರುಮೊಟ್ಟೆ ಕರಗ ಸಮಿತಿಯ ಚಾಮಿ, ಕಂಚಿಕಾಮಾಕ್ಷಿ ಕರಗ ಸಮಿತಿಯ ನವೀನ್ ಪಾಲ್ಗೊಳ್ಳಲಿದ್ದಾರೆ. ಬಳಿಕ ಜಾನಪದ ಹಾಡು - ಮಡಿಕೇರಿ ತಾಲೂಕು ಯುವ ಜಾನಪದ ಬಳಗದಿಂದ. ನಾಗರಹೊಳೆ ನಾಣಚ್ಚಿ ಹಾಡಿಯ ರಮೇಶ್ ಮತ್ತು ತಂಡದಿAದ ಜಾನಪದ ನೃತ್ಯ ಉಘೇ ಉಘೇ - ಬಸವರಾಜು ಬಳ್ಳಾರಿ ಅವರ ನೃತ್ಯ, ಪ್ರೊ. ಕೃಷ್ಣೇಗೌಡ ಅವರಿಂದ ಲಘು ಹಾಸ್ಯ ಜಾನಪದ ಮತ್ತು ಜೀವನ ಉಲ್ಲಾಸ. ನಾಣಚ್ಚಿ ಹಾಡಿಯ ರಮೇಶ್ ಮತ್ತು ತಂಡದಿAದ ಜಾನಪದ ನೃತ್ಯ ವೈವಿಧ್ಯ ನಡೆಯಲಿದೆ ಎಂದು ಜಾನಪದ ದಸರಾ ಸಂಚಾಲಕರಾದ ಅನಿಲ್ ಹೆಚ್. ಟಿ ಮತ್ತು ಮುನೀರ್ ಅಹ್ಮದ್ ತಿಳಿಸಿದ್ದಾರೆ.