ಮಡಿಕೇರಿ, ಸೆ. ೩೦: ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರಾಗಿ ಹೆಚ್.ಜೆ. ಶಿವಶಂಕರ್ ಅವರು ನಿಯುಕ್ತಿಗೊಂಡಿದ್ದಾರೆ. ಈ ಹಿಂದೆ ವೃತ್ತ ನಿರೀಕ್ಷಕರಾಗಿದ್ದ ವೆಂಕಟೇಶ್ ಅವರು ಇತ್ತೀಚೆಗೆ ದಾವಣಗೆರೆಗೆ ವರ್ಗಾವಣೆಗೊಂಡಿದ್ದಾರೆ. ತೆರವಾಗಿದ್ದ ಈ ಸ್ಥಾನಕ್ಕೆ ಬೆಂಗಳೂರು ಸಿಟಿ ಎಸ್.ಬಿ.ಯಲ್ಲಿದ್ದ ಶಿವಶಂಕರ್ ಅವರನ್ನು ನೇಮಿಸಿ ಇಲಾಖೆ ಆದೇಶ ಹೊರಡಿಸಿದೆ.