ಮಡಿಕೇರಿ ಸೆ. ೩೦: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎ.ಪಿ. ಧನಂಜಯ ಅವರು ಎನ್ಎಸ್ಎಸ್ ಶಿಬಿರದಿಂದ ಕಲಿತ ಗುಣಗಳು ಕೇವಲ ಶಿಬಿರಕ್ಕೆ ಸೀಮಿತವಾಗದೆ, ಜೀವನ ಪರ್ಯಂತ ಆಚರಿಸುವಂತಾಗಬೇಕು. ಭಾರತ ದೇಶದ ಸೇವೆಗೆ ಸಿದ್ಧರಾಗಿರುವ ನಿಮ್ಮಂತಹ ವಿದ್ಯಾರ್ಥಿಗಳಿಂದ ಸಾಧ್ಯ. ವಿದ್ಯಾರ್ಥಿಗಳು ತಾಳ್ಮೆ, ಸಹನೆ ಮತ್ತು ಸಮಸ್ಯೆಗಳನ್ನು ಎದುರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಿಬಿರಾರ್ಥಿಗಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ ವಹಿಸಿದ್ದರು. ಲಿಂಗಪ್ಪ ರೈ. ಬಿ.ಡಿ., ಯಮುನಾ, ಸುರೇಂದ್ರ ಕುಮಾರ್ ಇತರರು ಹಾಜರಿದ್ದರು. ಕೆ.ವಿ.ರಾಜಸುಂದರA ಅವರು ಸ್ವಾಗತಿಸಿದರು. ಶಿಬಿರಾಧಿಕಾರಿ ಚಿದಾನಂದ ಅವರು ನಿರೂಪಿಸಿದರು. ಶೃತಿ ಪ್ರಾರ್ಥಿಸಿದರು. ಗಾಯತ್ರಿ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.