ಮಡಿಕೇರಿ, ಸೆ. ೨೯: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವೈಸ್ ಚಾನ್ಸ್ಲರ್ (ಉಪಕುಲಪತಿ) ಹುದ್ದೆಗೆ ಕೊಡಗಿನವರಾದ ಪೊನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಆಗಿರುವ ಡಾ. ಸಿ.ಜಿ. ಕುಶಾಲಪ್ಪ ಅವರ ಹೆಸರು ಶಿಫಾರಸ್ಸುಗೊಂಡಿದೆ. ಪ್ರತಿಷ್ಠಿತ ಈ ಸ್ಥಾನಕ್ಕೆ ಇದೀಗ ಒಟ್ಟು ಮೂವರು ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ಇವರಲ್ಲಿ ಒಬ್ಬರು ಉಪಕುಲಪತಿಗಳಾಗಲಿದ್ದಾರೆ.
ಡಾ. ಸಿ.ಜಿ. ಕುಶಾಲಪ್ಪ ಅವರೊಂದಿಗೆ ಬೆಂಗಳೂರಿನ ಯೂನಿವರ್ಸಿಟಿ ಆಫ್ ಅಗ್ರಿ ಕಲ್ಚರಲ್ ಸೈನ್ಸ್ನ ಡೀನ್ ಡಾ. ಎನ್.ಬಿ. ಪ್ರಕಾಶ್ ಹಾಗೂ ಡಿ.ಎಸ್.ಡಬ್ಲೂö್ಯ. ಡಾ. ಸುರೇಶ್ ಅವರ ಹೆಸರುಗಳು ಸೇರಿವೆ. ಈ ಹಿಂದೆ ೨೦೦೭ ರಿಂದ ೨೦೧೦ರ ವರೆಗೆ ಕೊಡಗಿನವರಾದ ಡಾ. ಪಿ.ಜಿ. ಚಂಗಪ್ಪ ಅವರು ಮಾತ್ರ ಈ ಸ್ಥಾನಕ್ಕೆ ಆಯ್ಕೆಯಾಗಿದ್ದರು. ಇವರನ್ನು ಹೊರತುಪಡಿಸಿದರೆ ಕೊಡಗಿನ ಇನ್ನು ಯಾರಿಗೂ ಈತನಕ ಈ ಹುದ್ದೆಯ ಅವಕಾಶ ಲಭ್ಯವಾಗಿಲ್ಲ.
ಇದೀಗ ಡಾ. ಸಿ.ಜಿ. ಕುಶಾಲಪ್ಪ ಅವರ ಹೆಸರು ಒಟ್ಟು ಮೂರು ಮಂದಿಯ ಅಂತಿಮ ಪಟ್ಟಿಯಲ್ಲಿದ್ದು, ಕೊಡಗಿನವರೊಬ್ಬರಿಗೆ ಈ ಸ್ಥಾನ ಸಿಗುವಂತಾಗಬೇಕೆAಬ ನಿರೀಕ್ಷೆ ಜಿಲ್ಲೆಯವರಲ್ಲಿದೆ.
ಸಿ.ಜಿ. ಕುಶಾಲಪ್ಪ ಅವರು ಈ ಸ್ಥಾನಕ್ಕೆ ಅರ್ಹರಾದವರಾಗಿದ್ದು, ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ-ಸAಸ್ಥೆ, ಸಮಾಜಗಳ ಸಹಕಾರವೂ ಈ ನಿಟ್ಟಿನಲ್ಲಿ ಅಗತ್ಯವಾಗಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಪ್ರಸ್ತುತ ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಶಾಲಪ್ಪ ಅವರು ೩೭ ವರ್ಷಗಳ ಕಾಲ ಇಲಾಖೆ ಹಾಗೂ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರಾಗಿದ್ದಾರೆ.
ವೃತ್ತಿ ಜೀವನ: ೧೯೮೮ ರಿಂದ ೧೯೯೩ ತನಕ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ, ೧೯೯೩ ರಿಂದ ೧೯೯೮ ತನಕ ಸಹಾಯಕ ಪ್ರಾಧ್ಯಾಪಕರಾಗಿ, ೧೯೯೮ ರಿಂದ ೨೦೦೬ ತನಕ ಸಹ ಪ್ರಾಧ್ಯಾಪಕರಾಗಿ, ೨೦೦೬ ರಿಂದ ೨೦೨೦ ರವರೆಗೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಡಿಯಲ್ಲಿರುವ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಅಂS ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ೨೦೨೦ ರಿಂದ ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಊಂಉ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಇದರೊಂದಿಗೆ ೨೦೧೬ ರಿಂದ ಇಲ್ಲಿಯ ತನಕ ಕಾಲೇಜಿನ ಡೀನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.