*ಗೋಣಿಕೊಪ್ಪ, ಸೆ. ೨೯: ತರಕಾರಿ, ಕಾಯಿ ಪಲ್ಯಗಳು, ಸೊಪ್ಪು, ಹಣ್ಣು, ವಿವಿಧ ತಿಂಡಿಗಳ ಮಾರಾಟ, ವಿಜ್ಞಾನದ ಆವಿಷ್ಕಾರಗಳು, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ, ದೇಶಭಕ್ತಿ ಗೀತೆ, ಛದ್ಮವೇಷಗಳು ಮಕ್ಕಳ ದಸರಾ ಕಲರವವಾಗಿತ್ತು.
ಶ್ರೀ ಕಾವೇರಿ ದಸರಾ ಸಮಿತಿಯ ೪೪ನೇ ದಸರಾ ಜನೋತ್ಸವದ ಅಂಗವಾಗಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮಕ್ಕಳ ದಸರಾದಲ್ಲಿ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಚಿಂತನಾಶಕ್ತಿಯನ್ನು ಅನಾವರಣ ಗೊಳಿಸಿದರು.
ಮಕ್ಕಳು ತರಕಾರಿ, ಹಣ್ಣು ಹಂಪಲು, ಸೊಪ್ಪು, ತಿಂಡಿ ತಿನಿಸುಗಳು ಇನ್ನಿತರ ಗೃಹ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ವ್ಯಾಪಾರದ ಕೌಶಲ್ಯತೆಯನ್ನು ಅರಿತುಕೊಳ್ಳಲು ಮುಂದಾದರೆ, ಇನ್ನಿತರ ವಿದ್ಯಾರ್ಥಿಗಳು ವಿಜ್ಞಾನದ ಆವಿಷ್ಕಾರಗೊಳಿಸಿ ಭಾರತದ ಮುಂದಿನ ಭವಿಷ್ಯವನ್ನು ಸೂಚಿಸಿದರು. ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿ ನಮ್ಮ ಸಂಸ್ಕೃತಿಗಳನ್ನು ಎತ್ತಿ ಹಿಡಿದರೇ, ಉಳಿದ ವಿದ್ಯಾರ್ಥಿಗಳು ಜಾನಪದ ನೃತ್ಯಗಳ ಮೂಲಕ ನಮ್ಮ ಕಲಾ ಸಂಸ್ಕöÈತಿಯನ್ನು ಬಿಂಬಿಸಿದರು. ಕಾಡಿನ ಮಕ್ಕಳ ಸಾಂಪ್ರಾದಾಯಕ ಗೀತೆಗಳು ಮತ್ತು ಇನ್ನಿತರ ಜಾನಪದ ನೃತ್ಯಗಳು ವಿದ್ಯಾರ್ಥಿಗಳ ಸಮೂಹದಿಂದ ಮೂಡಿ ಬಂದಿತು.
ವಿಜ್ಞಾನ ಸ್ಪರ್ಧೆಯಲ್ಲಿ ಹನಿ ನೀರಾವರಿ ಮಾದರಿ, ಸೌರಮಂಡಲ, ಜಲಚಕ್ರ, ನವೀಕರಣಗೊಳ್ಳದ ಸಂಪನ್ಮೂಲಗಳ ಬಳಕೆ, ಬೆಳಕಿನ ವಕ್ರ ಭವನ, ವಿದ್ಯುತ್ ಉತ್ಪಾದನೆ, ಸೌರ ಒಲೆ, ನೀರಿನ ಚಿಲುಮೆಗಳು, ಯು.ಪಿ.ಎಸ್, ವಾಷಿಂಗ್ ಮೆಷಿನ್, ಉಪಕರಣಗಳ ನಿಯಂತ್ರಣ ಇತ್ಯಾದಿ ಮಾದರಿಗಳನ್ನು ಪ್ರದರ್ಶಿಸಿ ಉದಯೋನ್ಮುಖ ವಿಜ್ಞಾನಿಗಳಾಗುವ ಭವಿಷ್ಯವನ್ನು ನುಡಿದರು. ಛದ್ಮವೇಷದಲ್ಲಿ ಶ್ರೀ ಕೃಷ್ಣ, ಚಾಮುಂಡೇಶ್ವರಿ ಹೀಗೆ ದೈವಿಕ ಭಾವನೆ ಮೂಡಿಸುವ ಭಕ್ತಿ ಆರಾಧಕ ವೇಷಗಳನ್ನು ಮಕ್ಕಳು ತೊಟ್ಟು ಗಮನ ಸೆಳೆದರು.
ರಾಷ್ಟಿçÃಯ ಇನ್ಸೆ÷್ಪöÊರ್ ಅವಾರ್ಡ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿ ಸಿಂಚನ ಭಟ್ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೆಳಗಿ ಅವರ ಉಪಸ್ಥಿತಿಯಲ್ಲಿ ಮಕ್ಕಳ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದಳು.
ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ,
ಕಾವೇರಿ ದಸರಾ
(ಮೊದಲ ಪುಟದಿಂದ) ಸಮಿತಿ ಅಧ್ಯಕ್ಷ ಬಿ.ಎನ್ ಪ್ರಕಾಶ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಚೇತನ್, ಕೊಣಿಯಂಡ ಬೋಜಮ್ಮ, ಸದಸ್ಯರುಗಳಾದ ರಾಜೇಶ್, ಪುಷ್ಪ ಮನೋಜ್, ವಕೀಲ ಸಂಜೀವ್, ವೇದಿಕೆ ಸಮಿತಿ ಸದಸ್ಯ ಚಂದನ್ ಕಾಮತ್, ಮಕ್ಕಳ ದಸರಾ ಸಮಿತಿ ಸಂಚಾಲಕರು ತಿರುನೆಲ್ಲಿಮಡ ಜೀವನ್, ನಳಿನಿ, ಟಿ.ಕೆ. ವಾಮನ, ಎನ್. ನಿಂಗರಾಜು, ಐ.ಎಂ. ರೋಸಿ, ಕೃಷ್ಣ ಚೈತನ್ಯ ಡಿ, ಚಂದನ ಡಿ ಇದ್ದರು.ತಿರುನೆಲ್ಲಿಮಡ ಜೀವನ್, ನಳಿನಿ, ಟಿ.ಕೆ. ವಾಮನ, ಎನ್. ನಿಂಗರಾಜು, ಐ.ಎಂ. ರೋಸಿ, ಕೃಷ್ಣ ಚೈತನ್ಯ ಡಿ, ಚಂದನ ಡಿ ಇದ್ದರು.