ಮಡಿಕೇರಿ, ಸೆ. ೨೯: ದೇಶಾದ್ಯಂತ ಐದು ವರ್ಷಗಳ ಕಾಲ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿನ ಪಿಎಫ್‌ಐ ಕಚೇರಿಗೂ ಬೀಗಮುದ್ರೆ ಜಡಿಯಲಾಗಿದೆ.

ಕಳೆದ ರಾತ್ರಿ ನಗರದ ಮಹದೇವಪೇಟೆಯಲ್ಲಿದ್ದ ಕಚೇರಿಗೆ ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಡಿವೈಎಸ್‌ಪಿ ಗಜೇಂದ್ರಪ್ರಸಾದ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಕಚೇರಿಗೆ ಹಾಕಲಾಗಿದ್ದ ಬೀಗ ಒಡೆದು ಪರಿಶೀಲನೆ ನಡೆಸಿದರು. ತಡರಾತ್ರಿಯವರೆಗೆ ಪರಿಶೀಲನೆ ನಡೆಸಿ ಅಲ್ಲಿದ್ದ ವಸ್ತುಗಳು, ಫ್ಲೆಕ್ಸ್, ಬ್ಯಾನರ್‌ಗಳನ್ನು ಮುಟ್ಟುಗೋಲು

ಮಡಿಕೇರಿಯಲ್ಲೂ

ಪಿಎಫ್‌ಐ ಕಚೇರಿಗೆ ಬೀಗ

(ಮೊದಲ ಪುಟದಿಂದ) ಹಾಕಿಕೊಂಡು ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಮಹಜರು ನಡೆಸಿ ಕಚೇರಿಗೆ ಮತ್ತೆ ಬೀಗಮುದ್ರೆ ಜಡಿಯಲಾಯಿತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಹಿರಿಯ ಅಧಿಕಾರಿಗಳು, ಪೊಲೀಸರು ಪಾಲ್ಗೊಂಡಿದ್ದರು.