ಚೆಟ್ಟಳ್ಳಿ: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯರ ಹುಟ್ಟುಹಬ್ಬದ ದಿನವನ್ನು ಚೆಟ್ಟಳ್ಳಿ ಬಿಜೆಪಿ ವಾರ್ಡ್ ವತಿಯಿಂದ ಪಕ್ಷದ ಕಾರ್ಯಕರ್ತರು ಆಚರಿಸಿದರು. ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ಚೆಟ್ಟಳ್ಳಿ ವಾರ್ಡ್ ಅಧ್ಯಕ್ಷ ಪುತ್ತರಿರ ಶಿವು ನಂಜಪ್ಪ ಸ್ಥಳೀಯ ಕಾರ್ಯಕರ್ತರು ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ಮರಿಸಿದರು. ಬಿಜೆಪಿ ತಾಲೂಕು ಕಾರ್ಯದರ್ಶಿ ಮೇರಿ ಅಂಬುದಾಸ್ ಮಾತನಾಡಿ, ಭಾರತೀಯ ಜನತಾ ಪಕ್ಷಕ್ಕೆ ದೀನ್ ದಯಾಳ್ ಉಪಾಧ್ಯಾಯ ಅವರ ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸಿದರು.ಕರಿಕೆ: ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಯರ ಜನ್ಮ ದಿನವನ್ನು ಕರಿಕೆ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಇಲ್ಲಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ನಂತರ ಗ್ರಾಮದ ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖರಾದ ಹೊಸಮನೆ ಹರೀಶ್ ರಾಜೀನಾಮೆ ಸಲ್ಲಿಸಿದ ಹಿನ್ನೆಲೆ ನೂತನ ಶಕ್ತಿ ಕೇಂದ್ರ ಪ್ರಮುಖರಾಗಿ ಚಂಗಪ್ಪ ಹಾಗೂ ಸಹಸ್ರ ಮುಖರಾಗಿ ರವಿಕುಮಾರ್‌ರವರನ್ನು ಆಯ್ಕೆ ಮಾಡಲಾಯಿತು. ಇವರಿಗೆ ನಿರ್ಗಮಿತ ಪ್ರಮುಖ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡುವ ಮೂಲಕ ತಮ್ಮ ಜವಾಬ್ದಾರಿ ವಹಿಸಿಕೊಟ್ಟರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಕೆ.ಎ. ನಾರಾಯಣ ಸೇರಿದಂತೆ ಇತರೆ ಪ್ರಮುಖರು ಕಾರ್ಯಕರ್ತರು ಹಾಜರಿದ್ದರು.ಮಡಿಕೇರಿ: ಜನಸಂಘದ ಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾ ಧ್ಯಾಯ ಅವರ ಜನ್ಮ ದಿನ ವನ್ನು ಬಿಜೆಪಿ ವತಿಯಿಂದ ನಗರದ ವಾರ್ಡ್ ಸಂಖ್ಯೆ ೧೦ ರಲ್ಲಿ ಆಚರಿಸ ಲಾಯಿತು. ದೀನ್ ದಯಾಳ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಬೂತ್ ಅಧ್ಯಕ್ಷ ಶಿವಪ್ರಸಾದ್, ದೀನ್ ದಯಾಳ್ ಅವರ ಕುರಿತು ಮಾತನಾಡಿದರು. ಮೂಡ ಮಾಜಿ ಅಧ್ಯಕ್ಷ ಶಜಿಲ್ ಕೃಷ್ಣನ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.ಸೋಮವಾರಪೇಟೆ: ಜನಸಂಘದ ಸಂಸ್ಥಾಪಕ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನ ಹಾಗೂ ಪ್ರಧಾನಿ ಮೋದಿ ಅವರ ಮನ್ ಕೀ ಬಾತ್ ಆಲಿಸುವ ಕಾರ್ಯಕ್ರಮ ಇಲ್ಲಿನ ಬಸವೇಶ್ವರ ವಾರ್ಡ್ನಲ್ಲಿ ನಡೆಯಿತು.

ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮುಖರು, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ವಾರ್ಡ್ ಸದಸ್ಯ ಬಿ.ಆರ್. ಮೃತ್ಯುಂಜಯ ಜಯಣ್ಣ, ನಾಮನಿರ್ದೇಶನ ಸದಸ್ಯ ಎಸ್. ಮಹೇಶ್, ಪ್ರಮುಖರಾದ ಬಿ.ಪಿ. ಶಿವಕುಮಾರ್, ಜಿ.ಜೆ. ಗಿರೀಶ್, ಅಕ್ಷಯ ಗಿರೀಶ್, ಎಸ್.ಆರ್. ಸೋಮೇಶ್, ನಂಜುAಡ, ಗೀತಾ ರಾಜು, ಅನಿಲ್, ಯೋಗೇಶ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಚೆಯ್ಯಂಡಾಣೆ: ಸ್ಥಳೀಯ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಭಾರತೀಯ ಜನತಾ ಪಕ್ಷದ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನವನ್ನು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಆಚರಿಸಲಾಯಿತು. ನಂತರ ಪ್ರಧಾನ ಮಂತ್ರಿ ಮೋದಿ ಅವರ [ಮನ್ ಕೀ ಬಾತ್’ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ದನೋಜ್ ಪೊಕ್ಕುಳಂಡ್ರ, ಉಪಾಧ್ಯಕ್ಷ ಚೇನಂಡ ಸಂಪತ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪವನ್ ತೋಟಂಬೈಲು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಅಚ್ಚಯ್ಯ, ಎಪಿಎಂಸಿ ಸದಸ್ಯ ಚೇನಂಡ ಗಿರೀಶ್ ಪೂಣಚ್ಚ, ಕಾರ್ಯಕರ್ತರಾದ ಚೈಯಂಡ ಲವ ಅಪ್ಪಚ್ಚು, ದೀನ ಚಂಗಪ್ಪ, ಬಟ್ಟಿಯಂಡ ಜಯರಾಂ, ಅಪ್ಪಚ್ಚು, ತನು, ಮಹೇಶ್, ಮಿಥುನ್, ಪವನ್ ಮಂಜು, ಮಹಿಳಾ ಕಾರ್ಯಕರ್ತೆಯರಾದ ಶಿಲ್ಪ ಸಂಪತ್, ಸುಧಾ ಪೂಣಚ್ಚ ಮತ್ತಿತರರು ಉಪಸ್ಥಿತರಿದ್ದರು.ಗುಡ್ಡೆಹೊಸೂರು: ಇಲ್ಲಿನ ಬಿ.ಜೆ.ಪಿ. ಶಕ್ತಿ ಕೇಂದ್ರದ ವತಿಯಿಂದ ಸಮುದಾಯ ಭವನದಲ್ಲಿ ದೀನ್ ದಯಾಳ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದೀನ್ ದಯಾಳ್ ಅವರು ಜನಶಕ್ತಿ ಎಂಬ ಪಕ್ಷವನ್ನು ಸ್ಥಾಪಿಸಿ ಮುಂದೆ ಅದು ಭಾರತೀಯ ಜನತಾ ಪಕ್ಷವಾಗಿ ಬೆಳೆದಿದ್ದರ ಬಗ್ಗೆ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸತೀಶ್ ಅವರು ಸಭೆಯಲ್ಲಿ ವಿವರಿಸಿದರು. ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಪುಷ್ಪ ಮತ್ತು ಶಕ್ತಿ ಕೇಂದ್ರದ ಪ್ರಮುಖರಾದ ಕುಡೆಕ್ಕಲ್ ನಿತ್ಯಾನಂದ ಮತ್ತು ಪ್ರವೀಣ್ ಹಾಜರಿದ್ದರು. ಈ ಸಂದರ್ಭ ಇಲ್ಲಿನ ಪಂಚಾಯಿತಿ ಅಧ್ಯಕ್ಷೆ ನಂದಿನಿ, ಉಪಾಧ್ಯಕ್ಷೆ ಯಶೋದ, ಸದಸ್ಯರಾದ ಎಂ.ಆರ್. ಮಾದಪ್ಪ, ಸೌಮ್ಯ, ಸುಮಾ, ಕುಡೆಕ್ಕಲ್ ಶೀಲಾ, ಬಿ.ಎಂ. ಪ್ರದೀಪ್ ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.