ಮಡಿಕೇರಿ, ಸೆ. ೨೯: ಚೇರಂಬಾಣೆ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಮಡಿಕೇರಿ ತಾಲೂಕು ಮಟ್ಟದ ಅಂತರ ಶಾಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ವಿಭಾಗದ ಪಂದ್ಯಾಟಗಳಲ್ಲಿ ಹಾಕಿ, ಟೇಬಲ್ ಟೆನ್ನಿಸ್ ಮತ್ತು ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಮೇಲಾಟಗಳಲ್ಲಿ ಹರ್ಷಿತ್ ಎಸ್.ಆರ್. ೪೦೦ ಮೀ, ೬೦೦ ಮೀ ಓಟದಲ್ಲಿ ಪ್ರಥಮ ಮತ್ತು ೪x೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರೆ ಡೆಬ್ ಮಲ್ಯ ಮೈತಿ ೧೦೦ ಮೀ, ೨೦೦ ಮೀ. ಓಟದಲ್ಲಿ ಪ್ರಥಮ ಮತ್ತು ೪x೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರು. ಬೋಪಣ್ಣ ಎನ್.ಪಿ. ಎತ್ತರ ಜಿಗಿತದಲ್ಲಿ ಪ್ರಥಮ, ೨೦೦ ಮೀ. ಓಟದಲ್ಲಿ ದ್ವಿತೀಯ, ೪x೧೦೦ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರೆ ಗವಿನ್ ೪x೧೦೦ ಮೀ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಹಾಕಿಯಲ್ಲಿ ಪ್ರಥಮ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ದ್ವಿತೀಯ ರಿಲೇ ಓಟದಲ್ಲಿ ಪ್ರಥಮ ಸ್ಥಾನಗಳಿಸಿದರು.

ಮೇಲಾಟಗಳಲ್ಲಿ ಹೆಚ್.ಪಿ. ಶಾಂಭವಿ ೪೦೦ ಮೀ. ಓಟ, ೪x೧೦೦ ಮೀ ರಿಲೇ ಓಟ ಪ್ರಥಮ, ೬೦೦ ಮೀ. ಓಟ ಮತ್ತು ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನಗಳಿಸಿ ವೈಯಕ್ತಿಕ ಚಾಂಪಿಯನ್ ಶಿಪ್ ಪಡೆದುಕೊಂಡರು. ಚಶ್ಮಿತ ವಿ.ಡಿ. ತಟ್ಟೆ ಎಸೆತ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ, ರೀತಾ ಕೆ.ಎಸ್ ೨೦೦ ಮೀ ಪ್ರಥಮ, ೪x೧೦೦ ಮೀ. ರಿಲೇ ಓಟ ಪ್ರಥಮ, ೧೦೦ ಮೀ. ತೃತೀಯ, ನೇಕ್ಷಾ ಸಿ.ಡಿ ೨೦೦ ಮೀ. ಪ್ರಥಮ, ೪x೧೦೦ ರಿಲೇ ಓಟ ಪ್ರಥಮ, ಮಂಜುಳ ವೈ.ಯು. ಉದ್ದ ಜಿಗಿತ ತೃತೀಯ, ೪x೧೦೦ ಮೀ. ರಿಲೇ ಓಟ ಪ್ರಥಮ, ಕೃತಿಕಾ ಎಂ.ಎಲ್ ೬೦೦ ಮೀ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು.