ಗೋಣಿಕೊಪ್ಪ ವರದಿ, ಸೆ. ೨೯: ಮಾಯಮುಡಿ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಯುವಕ ಸಂಘ, ಕೊಡವ ಕೂಟ ಮತ್ತು ಅಖಿಲ ಅಮ್ಮಕೊಡವ ಸಮಾಜದ ವತಿಯಿಂದ ಅಕ್ಟೋಬರ್ ೧ ಮತ್ತು ೨ ರಂದು ಆಯೋಜಿಸಿರುವ ಕೊಡವ ಅಮ್ಮಕೊಡವ ಕೌಟುಂಬಿಕ ವಾಲಿಬಾಲ್ ಟೂರ್ನಿಯಲ್ಲಿ ೧೮ ತಂಡಗಳು ಸೆಣೆಸಾಟ ನಡೆಸಲಿವೆ.

ಮಂಡುವAಡ, ಸಣ್ಣುವಂಡ, ಮನೆಯಪಂಡ, ಬಲ್ಯಂಡ, ಅಪ್ಪುಡ, ಮಾಚಂಗಡ, ಆಪಟ್ಟೀರ, ಚಿಯಕ್‌ಪೂವಂಡ, ಮುಂಡಚಾಡಿರ, ಮಲ್ಲಂಗಡ, ಚೆರುವಾಳಂಡ, ಬಾಳೆಯಡ, ಮಲ್ಲಮಾಡ, ಚಿರಿಯಪಂಡ, ಮಲ್ಲೇಂಗಡ, ಮಂದನೆರವAಡ, ಬೊಟ್ಟಂಗಡ, ಅಮ್ಮಂಡ ತಂಡಗಳು ಪಾಲ್ಗೊಳ್ಳುತ್ತಿವೆ.

ಅ. ೧ ರಂದು ೯.೩೦ ಗಂಟೆಗೆ ಹಿರಿಯರಾದ ಚೆಪ್ಪುಡೀರ ಪಿ. ಅಯ್ಯಪ್ಪ ಉದ್ಘಾಟಿಸಲಿದ್ದಾರೆ. ಹಿರಿಯರಾದ ಕೊಂಗಾAಡ ಎಂ. ಗಣಪತಿ, ದಾನಿಗಳಾದ ಸಣ್ಣುವಂಡ ವಿನಯ್ ಅಯ್ಯಪ್ಪ, ಸಣ್ಣುವಂಡ ಗಣೇಶ್ ಪೊನ್ನಣ್ಣ, ಸಣ್ಣುವಂಡ ಬಿನಿಲ್ ಗಣಪತಿ, ಆಪಟ್ಟೀರ ಸಿ. ಜಾನಕ್ಕಿ, ಆಪಟ್ಟೀರ ಎಸ್. ನಾಚಯ್ಯ ಪಾಲ್ಗೊಳ್ಳಲಿದ್ದಾರೆ.