ಚೆಟ್ಟಳ್ಳಿ, ಸೆ. ೨೯: ವಿಶ್ವ ಪರಿಸರ ದಿನದ ಪ್ರಯುಕ್ತ ಮೈಸೂರಿನ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿ ಸುವ ಜಾಥಾವನ್ನು ಆಯೋಜಿಸ ಲಾಗಿತ್ತು. ಕೊಡಗಿನ ಸಾಂಪ್ರದಾಯಿಕ ನೃತ್ಯ ಮತ್ತು ಕೊಡವ ಸಂಸ್ಕೃತಿಯನ್ನು ಬಿಂಬಿಸಲು ಇದೇ ಮೊದಲ ಬಾರಿಗೆ ಕೊಡವರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಸುಮಾರು ೧೩ ಕೊಡವ ಯುವಕ- ಯುವತಿಯರು ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿ ಕೊಡವ ವಾಲಗಕ್ಕೆ ಹೆಜ್ಜೆ ಹಾಕುವ ಮೂಲಕ ಕೊಡಗಿನ ಸಂಸ್ಕೃತಿ ಯನ್ನು ಪ್ರತಿಬಿಂಬಿಸಿದರು. ಕರ್ನಾಟಕದ ವಿವಿಧ ಜಿಲ್ಲೆಗಳ ಕಲಾತಂಡಗಳು ವಿವಿಧ ಉಡುಗೆ - ತೊಡುಗೆ ಯೊಂದಿಗೆ ಸಂಸ್ಕೃತಿಯನ್ನು ಬಿಂಬಿಸಿದರು. ಪಥಸಂಚಲನದಲ್ಲಿ ಮಂದೆಯAಡ ವನಿತ್ ಸಂಜು, ಚೆಟ್ಟೋಳಿರ ಶರತ್ ಸೋಮಣ್ಣ, ಬಲ್ಲಣಮಾಡ ಲಿಕಿತ್, ಕಾಳಮಂಡ ರಾಬಿನ್, ಮಚ್ಚೆಂಗಡ ಸಚಿನ್, ಪೊದುವಡ ಗೌತಮ್, ಮಾಳೇಟಿರ ಗಣಪತಿ, ಕೊಟ್ಟಂಗಡ ಬಿದ್ದಪ್ಪ, ಅಲ್ಲುಮಾಡ ಶೀತಲ್, ನಾಮೇರ ಯಜ್ಞ, ಕೊಕ್ಕಲೆಮಾಡ ಗೌತಮಿ, ದೇಯಂಡ ಸಿಂಚನ, ಗಾಣಂಗಡ ಯಾತಿನ್ ಮುಂತಾದವರು ಭಾಗವಹಿಸಿದ್ದರು.