ಮಡಿಕೇರಿ, ಸೆ. ೨೯: ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್ನ ‘ಆರೋಗ್ಯಸಿರಿ’ ಕಾರ್ಯಕ್ರಮದಡಿಯಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆ ಸಹಯೋಗದಿಂದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸಿ ಸಾಮಾನ್ಯ ರೋಗ ತಪಾಸಣೆ, ಮೂಳೆ ಮತ್ತು ಕೀಲು ರೋಗ, ಮೂತ್ರ ರೋಗ, ಹೃದಯ ಸಂಬAಧಿ ಕಾಯಿಲೆ, ಬಿ.ಪಿ, ಸಕ್ಕರೆ ಕಾಯಿಲೆ, ಇ.ಸಿ.ಜಿ ಮತ್ತು ಎಕೋ/ ತಪಾಸಣೆ ಉಚಿತವಾಗಿ ನಡೆಸಿಕೊಂಡರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರತನ್ ತಮ್ಮಯ್ಯ ಅವರು ಮಾತನಾಡಿ, ಮಡಿಕೇರಿ, ಸೆ. ೨೯: ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್ನ ‘ಆರೋಗ್ಯಸಿರಿ’ ಕಾರ್ಯಕ್ರಮದಡಿಯಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆ ಸಹಯೋಗದಿಂದ ಬೃಹತ್ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಆಗಮಿಸಿ ಸಾಮಾನ್ಯ ರೋಗ ತಪಾಸಣೆ, ಮೂಳೆ ಮತ್ತು ಕೀಲು ರೋಗ, ಮೂತ್ರ ರೋಗ, ಹೃದಯ ಸಂಬAಧಿ ಕಾಯಿಲೆ, ಬಿ.ಪಿ, ಸಕ್ಕರೆ ಕಾಯಿಲೆ, ಇ.ಸಿ.ಜಿ ಮತ್ತು ಎಕೋ/ ತಪಾಸಣೆ ಉಚಿತವಾಗಿ ನಡೆಸಿಕೊಂಡರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರತನ್ ತಮ್ಮಯ್ಯ ಅವರು ಮಾತನಾಡಿ, (ಮೊದಲ ಪುಟದಿಂದ) ಕಾಣಿಸಿಕೊಂಡರೂ, ೩ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವ ಅಗತ್ಯವಿದೆ ಎಂದು ಹೇಳಿದರು. ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಗೋಕಲೆ ಅವರು ಮಾತನಾಡಿ ಶಿಬಿರದ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ವಸಂತ್ ಕುಮಾರ್ ವಂದಿಸಿದರು. ವೇದಿಕೆಯಲ್ಲಿ ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಚಂಗಪ್ಪ ಇದ್ದರು.
ಅಶ್ವಿನಿ ಆಸ್ಪತ್ರೆ ಕಾರ್ಯ ನಿರ್ವಾಹಕ ಅಧಿಕಾರಿ ರವೀಂದ್ರ, ಮೂಡಾ ನಿಕಟಪೂರ್ವ ಅಧ್ಯಕ್ಷ ರಮೇಶ್ ಹೊಳ್ಳ, ಆಸ್ಪತ್ರೆಯ ಟ್ರಸ್ಟಿ ಮೋಹನ್‌ದಾಸ್, ರೋಟರಿ ವುಡ್ಸ್ ಉಪಾಧ್ಯಕ್ಷೆ ಪದ್ಮಗಿರಿ, ಖಜಾಂಚಿ ಕವಿತಾ, ಸದಸ್ಯರುಗಳಾದ ಧನಂಜಯ ಶಾಸ್ತಿç, ರಂಜಿತ್ ಕಿಗ್ಗಾಲ್, ಹರೀಶ್ ಕಿಗ್ಗಾಲ್, ಪ್ರಿಮಿಳಾ ಶೆಟ್ಟಿ, ಲೋಕೇಶ್, ಪ್ರಜ್ವಲ್, ಪ್ರಶಾಂತ್, ಭಗತ್ ರಾಜ್, ವಿಕ್ರಂ, ಪ್ರಜ್ಞಾ, ಅನುಶ್ರೀ ಹಾಗೂ ಇತರರು ಇದ್ದರು.
ಸುಯೋಗ್ ಆಸ್ಪತ್ರೆಯ ವೈದ್ಯರುಗಳಾದ ಮಂಜುನಾಥ್, ಶಶಿಕಲಾ, ನಿಶ್ಚಿತ್ ಹಾಗೂ ಹರ್ಷ ಅವರುಗಳು ಆರೋಗ್ಯ ತಪಾಸಣೆ ನಡೆಸಿದರು.