ಮಡಿಕೇರಿ, ಸೆ. ೩೦: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ತೋರಿದವರಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದಿಂದ ಜಿಲ್ಲೆಯ ವೀರಾಜಪೇಟೆ ಗಾಂಧಿನಗರದ ಮುಂಡ್ಯೋಳAಡ ಬೋಪಯ್ಯ ಭಾಜನರಾಗಿದ್ದಾರೆ.

ತಾ. ೧ ರಂದು (ಇಂದು) ಬೆಂಗಳೂರಿನ ರವೀಂದ್ರ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

(ಮೊದಲ ಪುಟದಿಂದ) ಮೂಲತಃ ಚೆಯ್ಯಂಡಾಣೆ ಚೇಲಾವರದ ನಿವಾಸಿಯಾಗಿರುವ ಇವರು ೧೮ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ೧೯೭೧ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ್ದರು. ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಇವರು ಕೋಲಾರ, ಚನ್ನಪಟ್ಟಣ ಸೇರಿ ಜಿಲ್ಲೆಯ ಅಮ್ಮತ್ತಿ ಒಂಟಿಯAಗಡಿಯಲ್ಲಿ ಸುದೀರ್ಘ ೨೫ ವರ್ಷಗಳು ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಉತ್ತಮ ಸೇವೆಗೆ ಕರ್ನಾಟಕ ರತ್ನ, ಕೊಡಗು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳು ಸಂದಿವೆ.