ಮಡಿಕೇರಿ, ಸೆ. ೨೯: ಕಲಾ ಸಂಭ್ರಮ ವೇದಿಕೆ-ಗಾಂಧಿ ಮೈದಾನದಲ್ಲಿ ಸಂಜೆ ೬.೩೦ಕ್ಕೆ ಮಹಿಳಾ ದಸರಾ ಪ್ರಯುಕ್ತ ನಗರಸಭಾ ಸದಸ್ಯೆಯರಿಂದ ಸ್ವಾಗತ ನೃತ್ಯ, ಕೊಡವ ಪೊಮ್ಮಕ್ಕಡ ಕೂಟದ ವತಿಯಿಂದ ಕಲಾ ವೈವಿಧ್ಯ, ವೈಷ್ಣವಿ ವಿ. ಭಟ್ ಮಂಗಳೂರು, ಸ್ಯಾಕ್ಸೋಫೋನ್ ವಾದನ, ನಿಸರ್ಗ ಕಲಾ ತಂಡ ಗೋಣಿಕೊಪ್ಪದಿಂದ ನೃತ್ಯ, ಕೊಡಗು ಜಿಲ್ಲಾ ಸರಕಾರಿ ಮಹಿಳಾ ನೌಕರರಿಂದ ನೃತ್ಯ ವೈವಿಧ್ಯ, ಹಿಂದೂ ಮಲಯಾಳಿ ಸಂಘದವರಿAದ ತಿರುವಾದಿರ ಕಳಿ, ಕೊಡಗು ಗೌಡ ಮಹಿಳಾ ಒಕ್ಕೂಟದವರಿಂದ ಯಕ್ಷಗಾನ ವೈಭವ, ಲಯನ್ಸ್ ಕ್ಲಬ್ ಸದಸ್ಯೆಯರಿಂದ ದಾಂಡಿಯಾ ನೃತ್ಯ, ಪ್ರೀತಾ ಕೃಷ್ಣ ಮತ್ತು ತಂಡದವರಿAದ ನೃತ್ಯ ವೈವಿಧ್ಯ, ಗಾನಲಹರಿ ಮೈಸೂರು ತಂಡದ ಗಾಯಕಿಯರಾದ ದಿವ್ಯಾ ರಾಮಚಂದ್ರ ಮತ್ತು ಶರಥಿ ಪಾಟೀಲ್ ಅವರಿಂದ ಸಂಗೀತ ಸಂಭ್ರಮ ನಡೆಯಲಿದೆ.