ಮಡಿಕೇರಿ, ಸೆ. ೩೦: ರಾಹುಲ್ ಗಾಂಧಿ ಅವರು ಕೈಗೊಂಡಿರುವ ಭಾರತ್ ಜೋಡೋ ಯಾತ್ರೆಯನ್ನು ಬೆಂಬಲಿಸಿ ಕೊಡಗು ಜಿಲ್ಲೆಯಿಂದ ಸುಮಾರು ೫ ಸಾವಿರ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧೆಡೆಯಿಂದ ಒಟ್ಟು ೫೦ ಬಸ್ ಸೇರಿ ಟೆಂಪೋ, ಕಾರು ಮೂಲಕ ಒಟ್ಟು ೫ ಸಾವಿರ ಕಾರ್ಯಕರ್ತರು ನಂಜನಗೂಡು ಬಳಿಯ ಕಳಲೆಗೆ ತೆರಳಿ ಸುಮಾರು ೧೦ ಕಿ.ಮೀ. ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದೇವೆ. ಈ ಸಂದರ್ಭ ಕೊಡವ ಸಂಸ್ಕೃತಿ, ಸುಗ್ಗಿ ಕುಣಿತವನ್ನು ಪ್ರದರ್ಶಿಸಲಾಗುತ್ತದೆ ಎಂದು ಹೇಳಿದ್ದಾರೆ.