ಶ್ರೀಮಂಗಲ, ಸೆ. ೨೯: ಸಂಸ್ಕೃತಿ, ಆಚಾರ- ವಿಚಾರ ಪದ್ಧತಿ ಪರಂಪರೆಗಳು ಉಳಿಯಲು ಜನಾಂಗ ಉಳಿದರೆ ಮಾತ್ರ ಸಾಧ್ಯ, ಕೊಡವ ಸಮುದಾಯದಲ್ಲಿ ವಧು ವರರ ಅನ್ವೇಷಣೆ ಕಾರ್ಯವನ್ನು ಮತ್ತಷ್ಟು ಉತ್ತೇಜಿಸಬೇಕು. ಎಲ್ಲಾ ಕೊಡವ ಸಮಾಜದಲ್ಲಿ ತಂದ್- ಬೆಂದು ಕಾರ್ಯಕ್ರಮವನ್ನು ಆಯೋಜನೆ ಮಾಡುವುದರ ಮೂಲಕ ಆಯಾಯ ಭಾಗದಲ್ಲಿನ ವಧು-ವರರಿಗೆ ಸಹಾಯವಾಗುವಂಥ ನಿಟ್ಟಿನಲ್ಲಿ ಕೆಲಸ ಮಾಡಲು ಎಲ್ಲಾ ಕೊಡವ ಸಮಾಜ ಗಳಿಗೆ ಮನವಿಯನ್ನು ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಸಹಯೋಗದೊಂದಿಗೆ ಪೊನ್ನಂಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ತಂದ್ ಬೆಂದ್'ಕಾರಡ ಮೋಪ್‌ಕೂಟ ಕಾರ್ಯಕ್ರಮದಲ್ಲಿ ಜನಾಂಗದ ಹಿತದೃಷ್ಟಿಯಿಂದ ಮುಂದಿನ ಪೀಳಿಗೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಚರ್ಚೆಯನ್ನು ಮಾಡಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪ್ರತಿಯೊಂದು ಕೊಡವ ಸಮಾಜ ಕೊಡವ ಸಮುದಾಯದ ಕೇಂದ್ರ ಬಿಂದುವಾಗಿದ್ದು, ವಧು-ವರರಿಗೆ ಸಹಾಯವಾಗುವಂತಹ ನಿಟ್ಟಿನಲ್ಲಿ ತಂದು ಬೆಂದು ವಿಭಾಗವನ್ನು ತೆರೆಯುವಂತೆಯೂ, ತಿಂಗಳಲ್ಲಿ ಒಂದು ದಿನ ಇಂತಹ ವಧು-ವರರ ದಾಖಲಾತಿಯನ್ನು ಮಾಡುವುದು. ಕೊಡವ ಸಮಾಜದಲ್ಲಿ ನಡೆಯು ವಂತಹ ಕೊಡವ ಸಾರ್ವಜನಿಕ ಕಾರ್ಯಕ್ರಮದಲ್ಲಿ ತಂದ್ ಬೆಂದು ಕಾರ್ಯಕ್ರಮವನ್ನು ಆಯೋಜನೆ ಮಾಡುವಂತೆಯೂ, ಈ ಕಾರ್ಯಕ್ರಮವನ್ನು ಕೇಂದ್ರೀಕೃತ ಮಾಡಿ ಪ್ರತಿ ಕೊಡವ ಸಮಾಜದಲ್ಲಿ ವಧು-ವರ ಅನ್ವೇಷಣಕಾರರ ಹೆಸರು ಹಾಗೂ ಫೋನ್ ನಂಬರ್‌ಗಳನ್ನು ನೀಡು ವಂತೆಯೂ ಪ್ರತಿ ಕೊಡವ ಸಮಾಜದ ಆಡಳಿತ ಮಂಡಳಿಯೊAದಿಗೆ ಚರ್ಚಿಸಿ ತೀರ್ಮಾನವನ್ನು ಕೈಗೊಳ್ಳುವಂತೆ ನಿರ್ಣಯವನ್ನು ಕೈಗೊಳ್ಳಲಾಯಿತು.
ಮನ ಒಪ್ಪಿದರೆ ಗಣ ಒಪ್ಪಿ ಬರುತ್ತದೆ ಎಂದು ಹಿಂದಿನವರು ನಂಬಿದ್ದರು, ಆದರೆ ಇಂದು ವಧು ವರರ ಜಾತಕ, ಸಂಖ್ಯೆ ಮುಂತಾದ ವಿಷಯಗಳು ತಾಳೆ ಬರುತ್ತಿಲ್ಲ. ಇದರಿಂದ ಸಾಕಷ್ಟು ಮದುವೆಗಳು ಮುಂದೂಡಲ್ಪಡುತ್ತಿದೆ. ಇದು ಒಂದು ವ್ಯವಸ್ಥಿತ ಸಂಚು. ಇನ್ನಾದರೂ ಸಮಾಜ ಬಾಂಧವರು ಈ ವಿಷಯ ದಲ್ಲಿ ಹೆಚ್ಚಿನ ಜಾಗರೂಕತೆಯಿಂದ ಇರಬೇಕು, ಇಂತಹ ವಿಷಯದಲ್ಲಿ ಹಿರಿಯರೊಂದಿಗೆ ಹಾಗೂ ತಿಳಿದವ ರೊಂದಿಗೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ತಾ. ೨೬ ರಿಂದ ಡಿಸೆಂಬರ್ ೨೦ ರೊಳಗಡೆ ಅತಿ ಹೆಚ್ಚು ತಂದ್ ಬೆಂದು ಕಾರ್ಯಕ್ರಮವನ್ನು ಮಾಡಿ ಅದರ ದಾಖಲಾತಿಯನ್ನು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ನ ಕಚೇರಿಗೆ ತಲುಪಿಸಿದರೆ ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ನಡೆಯುವ ಪುತ್ತರಿ ಸಾಂಸ್ಕೃತಿಕ ದಿನಾಚರಣೆ ದಿನದಂದು "ನಾಟ್ ಕುಂಜ್ಞಪ್ಪ ಮತ್ತು ನಾಟ್ ಕುಂಜ್ಞವ್ವ" ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುವುದು ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ ಅವರು ಘೋಷಣೆ ಮಾಡಿದರು. ಕೊಡವ ಕ್ಲಾನ್ ಡಾಟ್ ಕಮ್‌ನ ಮಾಲೀಕರಾದ ಗುಮ್ಮಟಿರ ಕಿಶು ಉತ್ತಪ್ಪ ಅವರು ಇದೇ ಡಿಸೆಂಬರ್ ೨೫ ರಂದು ನಡೆಸಲಿರುವ "ವರ್ಡ್ ಲಾರ್ಜೆಸ್ಟ್ ಪ್ಯಾಮಿಲಿ ಗ್ಯಾದರ್" ಕಾರ್ಯಕ್ರಮ ದಲ್ಲಿ ಜಬ್ಬೂಮಿ ಸಂಘಟನೆಯ ವತಿಯಿಂದ ವಧು-ವರರ ಅನ್ವೇಷಣೆಗೆ ಒಂದು ಸ್ಟಾಲನ್ನು ಉಚಿತವಾಗಿ ನೀಡುವುದಾಗಿಯೂ ಮತ್ತು ಕೊಡವ ಕ್ಲಾನ್ ವೆಬ್ ಸೈಟ್ ನಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರ ವಧು ವರರ ಅನ್ವೇಷಣಾ ಶುಲ್ಕವನ್ನು ಡಿಸೆಂಬರ್ ೨೪ ರವರೆಗೆ ಉಚಿತವಾಗಿ ನೀಡುವುದಾಗಿ ಘೋಷಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಜಬ್ಬೂಮಿ ಸಂಘಟನೆಯ ಪ್ರಮುಖರಾದ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಮಾಚಿಮಾಡ ರವೀಂದ್ರ, ಜಮ್ಮಡ ಗಣೇಶ್ ಅಯ್ಯಣ್ಣ, ಮಾಳೆಟೀರ ಶ್ರೀನಿವಾಸ್, ಅಪ್ಪಂಡೇರAಡ ಯಶವಂತ್ ಕಾಳಪ್ಪ, ಬಲ್ಲಡಿಚಂಡ ರನ್ನು, ಉಳುವಂಗಡ ಲೋಹಿತ್ ಭೀಮಯ್ಯ, ಅಚ್ಚಾಂಡಿರ ಪವನ್ ಪೆಮ್ಮಯ್ಯ, ಕೊಕ್ಕಲೆರ ಶ್ಯಾಂ, ಶಾಂತೆಯAಡ ನಿರನ್, ಪಾಲೇಂಗಡ ಅಮಿತ್, ಚೋಕಿರ ಅನಿತಾ, ಚೆಯ್ಯಂಡ ಸತ್ಯ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ಉಪಾಧ್ಯಕ್ಷೆ ಚಿರಿಯಪಂಡ ಇಮ್ಮಿ ಉತ್ತಪ್ಪ, ನಿರ್ದೇಶಕರಾದ ಮೂಕಳೇರ ಕಾವ್ಯ, ಚೀರಂಡ ಕಂದಾ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ. ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಮತ್ತಿತರರು ಹಾಜರಿದ್ದರು. ಸುಮಾರು ೬೦ ವಧು-ವರ ಅನ್ವೇಷಣಕಾರರು, ವಧು ವರರ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.