ಮಡಿಕೇರಿ, ಸೆ. ೨೯: ಕೊಡವ ಜನಾಂಗ ಹಾಗೂ ಜಮ್ಮಾ ಆಧಾರದಲ್ಲಿನ ಕೋವಿ ವಿನಾಯಿತಿ ಹಕ್ಕು ಕುರಿತಾಗಿ ಸುಪ್ರೀಂಕೋರ್ಟ್ನಲ್ಲಿ ನಿವೃತ್ತ ಕ್ಯಾಪ್ಟನ್ ವೈ.ಕೆ. ಚೇತನ್ ಅವರು ಪ್ರಶ್ನಿಸಿರುವ ಅರ್ಜಿಗೆ ಸಂಬAಧಿಸಿದ ವಿಚಾರಣೆ ಯನ್ನು ನ್ಯಾಯಾಲಯ ನವೆಂಬರ್ ೧೭ಕ್ಕೆ ಮುಂದೂಡಿದೆ.
ಈ ಕುರಿತ ಅರ್ಜಿಗೆ ಸಂಬAಧಿಸಿದAತೆ ಆಗಸ್ಟ್ ೨೫ ರಂದು ಸುಪ್ರೀಂಕೋರ್ಟ್ ರಿಜಿಸ್ಟಾçರ್ ಎದುರು ವಿಚಾರಣೆ ನಡೆದಿದ್ದು, ಎದುರುದಾರರಿಗೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಸೆ. ೨೯ಕ್ಕೆ ಮತ್ತೆ ವಿಚಾರಣೆಯನ್ನು ನಿಗದಿಪಡಿಸಲಾಗಿತ್ತು. ಇಂದು ಮತ್ತೆ ರಿಜಿಸ್ಟಾçರ್ ಎದುರು ಪ್ರಕರಣ ವಿಚಾರಣೆಗೆ ಬಂದಿದ್ದು, ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಬೆಂಗಳೂರು ಕೊಡವ ಸಮಾಜದ ಪರವಾಗಿ ವಕೀಲ ಮಲ್ಲೇಂಗಡ ಗಗನ್ ಅವರ ಮೂಲಕ ಸಿದ್ದಪಡಿಸಿರುವ ಆಕ್ಷೇಪಣೆಯನ್ನು ಸುಪ್ರೀಂಕೋರ್ಟ್ ವಕೀಲ ಅಕ್ಷತ್ ಶ್ರೀವಾತ್ಸ್ಸವ್ ಅವರು ಈಗಾಗಲೇ ಸಲ್ಲಿಸಿದ್ದಾರೆ.
ಸಿಎನ್ಸಿ ಸಂಘಟನೆಯ ಆಕ್ಷೇಪಣೆಯೂ ವಕೀಲ ವಿಕ್ರಂ ಹೆಗ್ಡೆ ಮೂಲಕ ಸಲ್ಲಿಸಲ್ಪಟ್ಟಿದೆ. ಅಖಿಲ ಕೊಡವ ಸಮಾಜದಿಂದಲೂ ಪ್ರತ್ಯೇಕ ಆಕ್ಷೇಪಣೆ ಸಲ್ಲಿಕೆಯಾಗಿದೆ. ಇದೀಗ ಇನ್ನು ಕೆಲವು
ಕೋವಿ ಹಕ್ಕು ಪ್ರಶ್ನೆ
ನ. ೧೭ಕ್ಕೆ ಮುಂದೂಡಿಕೆ
(ಮೊದಲ ಪುಟದಿಂದ) ಪ್ರತಿವಾದಿಗಳಾಗಿರುವವರು ತಮ್ಮ ವಕೀಲರ ಮೂಲಕ ಈ ಬಗ್ಗೆ ಮತ್ತಷ್ಟು ಕಾಲಾವಕಾಶಕ್ಕೆ ಇಂದು ಮನವಿ ಮಾಡಿರುವದಾಗಿ ತಿಳಿದು ಬಂದಿದೆ. ಇದನ್ನು ಪುರಸ್ಕರಿಸಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನವೆಂಬರ್ ೧೭ಕ್ಕೆ ನಿಗದಿಪಡಿಸಿ ಆದೇಶ ನೀಡಿದೆ.