ನಾಪೋಕ್ಲು, ಸೆ. ೨೮: ಸ್ಥಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾವಿಯಲ್ಲಿ ಗಿಡಗಂಟಿಗಳು ಬೆಳೆದು ಬಾವಿಯ ನೀರನ್ನು ಉಪಯೋಗಿಸಲು ಸಾಧ್ಯವಾಗದಂತಹ ಅವ್ಯವಸ್ಥೆಯನ್ನು ಸ್ಥಳೀಯ ಶೌರ್ಯ ತಂಡದ ಸದಸ್ಯರ ಗಮನಕ್ಕೆ ಇಲ್ಲಿಯ ನಿವಾಸಿಗಳು ತಂದಿದ್ದರು.
ಈ ದುಸ್ಥಿತಿಯನ್ನು ಮನಗÀಂಡು ಶೌರ್ಯ ಸದಸ್ಯರು ಕಾರ್ಯಪ್ರವೃತ್ತ ರಾಗಿ ಬಾವಿಯ ಒಳಭಾಗದಲ್ಲಿರುವ ಗಿಡ ಗಂಟಿಗಳನ್ನು ಕಡಿದು ಹಗ್ಗದ ಸಹಾಯದಿಂದ ಕೆಳಗಿಳಿದು ಕಸವನ್ನೆಲ್ಲಾ ಮೇಲಕ್ಕೆತ್ತಿ ಸುಣ್ಣ ಹಾಗೂ ಬ್ಲಿಚಿಂಗ್ ಹುಡಿಯನ್ನು ಹಾಕಿ ಶುಚಿಗೊಳಿಸಿದರು. ಈ ಸೇವಾ ಕಾರ್ಯದಲ್ಲಿ ಶೌರ್ಯ ಸದಸ್ಯರಾದ ದಿಲೀಶ್ ಎನ್.ಬಿ., ನಾರಾಯಣ, ಸತೀಶ್‌ಕುಮಾರ್, ಗಣೇಶ್ ಭಾಗವಹಿಸಿದ್ದರು.