ಕೂಡಿಗೆ, ಸೆ. ೨೮: ಚೈನಾ ಮೂಲದ ಜಿನ್‌ಜುನ್ ಕಿಯಾನ್ ಬಾನ್ ಎಂಬ ಸಸ್ಯ ಪ್ರಬೇಧವಾಗಿರುವ ಸಹಸ್ರ ದಳದ ಸುಂದರ ತಾವರೆ ರೂಪ ಮನೆಯಂ ಗಳದಲ್ಲಿ ಅರಳಿ ನಿಂತು ನೋಡುಗರನ್ನು ಆಕರ್ಷಿಸುತ್ತಿದೆ.

ಕೊಡಗಿನ ಪ್ರಥಮ ಎಂಬAತೆ ಈ ತಾವರೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಗುಪ್ಪೆ ಗ್ರಾಮದ ಪ್ರಗತಿ ಪರ ರೈತ ಟಿ.ಎಂ. ಬೇಬಿ ಅವರ ಮನೆಯಂಗಳದಲ್ಲಿ ಕಂಡುಬAದಿದೆ.

ಸಾವಿರಕ್ಕೂ ಹೆಚ್ಚು ದಳಗಳನ್ನು ಬಿಡುವ ತಾವರೆ ಹೂವಿನ ಗೆಡ್ಡೆಯನ್ನು ಕೇರಳ ರಾಜ್ಯದ ತ್ರಿಶೂರ್ ನರ್ಸರಿಯಲ್ಲಿ ಬೆಳೆಸಲಾಗಿದೆ. ಚೈನಾದಿಂದ ೨೦೧೫ ರಲ್ಲಿ ಕೇರಳದ ವ್ಯಕ್ತಿಯೊಬ್ಬರು ತರಿಸಿ ಟ್ರಬರ್ ನಾಟಿಯ ಮೂಲಕ ತಾವರೆ ಹೂವಿನ ತೊಟ್ಟಿಯಲ್ಲಿ ಬೆಳೆಸಿದ್ದರು.

ಈ ಗೆಡ್ಡೆಯು ಎರಡು ವರ್ಷಗಳ ನಂತರ ೨೦೧೭ ರಲ್ಲಿ ಹೂ ಬಿಟ್ಟು ಸಾವಿರಕ್ಕೂ ಹೆಚ್ಚು ದಳಗಳನ್ನು ಹೊಂದಿರುವುದು ವಿಶೇಷವಾಗಿತ್ತು.

ಈ ಹೂವಿನ ಗೆಡ್ಡೆಯನ್ನು ಕೇರಳದಿಂದ ಪ್ರಥಮವಾಗಿ ಒಂದು ಗೆಡ್ಡೆಗೆ ಒಂದು ಸಾವಿರ ರೂಪಾಯಿಯಂತೆ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸಿನಗುಪ್ಪೆ ಗ್ರಾಮ ನಿವಾಸಿಯಾದ ಆಲೂರುಸಿದ್ದಾಪುರ ರೋಟರಿ ಕ್ಲಬ್ ಅಧ್ಯಕ್ಷ, ತೊರೆನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಟಿ. ಬೇಬಿ ಅವರು ಮನೆಯ ಮುಂದಿನ ಸುಂದರ ನೀರಿನ ಟ್ಯಾಂಕ್‌ನ ತಾವರೆ ತೋಟದಲ್ಲಿ ಬೆಳೆಸಿದ್ದಾರೆ.

ಕೊಡಗಿನಲ್ಲಿ ಪ್ರಥಮವಾಗಿ ೨೦೨೨ ರ ಜನವರಿಯಲ್ಲಿ ತಂದು ಬೆಳೆಸಲಾಗಿ ಇದೀಗ ಜಿಲ್ಲೆಯ ವಾತಾವರಣ ಈ ತಾವರೆ ಹೂವಿಗೆ ಅನುಕೂಲವಾಗಿರುವುದರಿಂದ ಎಂಟು ತಿಂಗಳುಗಳಲ್ಲಿಯೇ ಗಿಡದ ಮಾದರಿಯಲ್ಲಿ ಬೆಳೆದು ಸುಂದರವಾದ ಒಂದು ಹೂವಿನಲ್ಲಿ ಸಾವಿರಕ್ಕೂ ಹೆಚ್ಚು ದಳಗಳನ್ನು ಹೊಂದಿರುವ ತಾವರೆ ಹೂವನ್ನು ಅರಸಿನಗುಪ್ಪೆ ಬೇಬಿಯವರ ಮನೆಯ ಮುಂಭಾಗ ತಾವರೆ ತೊಟ್ಟಿಯಲ್ಲಿ ಕಾಣಬಹುದಾಗಿದೆ.