ಸುಂಟಿಕೊಪ್ಪ, ಸೆ. ೨೮: ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ನಂತರ ನಡೆಯಬೇಕಿದ್ದ ದೃಢಕಳಸ ಪೂಜೆಯು ಸೋಮವಾರ ಕೇರಳದ ತಂತ್ರಿಗಳಾದ ಶಂಕರ ನಂಬೂದರಿ ಮತ್ತು ಪ್ರಧಾನ ಅರ್ಚಕ ಸುಜಿತ್ ನಾರಾಯಣ ನಂಬೂದರಿ, ನಾಗೇಶ್ ನಂಬೂದರಿ, ಉಣ್ಣಿಕೃಷ್ಣ ನಂಬೂದರಿ, ರಾಮಕೃಷ್ಣ ನಂಬೂದರಿ, ತಂಡದವರಿAದ ನೆರವೇರಿಸಲಾಯಿತು. ನೂರಾರು ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭ ಶ್ರೀ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವg ಸಮಿತಿ ಗೌರವ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ಡಾ: ಶಶಿಕಾಂತ್ ರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಉಪಾಧ್ಯಕ್ಷ ಕೆ.ಪಿ.ಜಗನಾಥ್, ಸಮಿತಿ ಸದಸ್ಯರಾದ ವಿನೋದ್, ರಮೇಶ್ ಪಿಲ್ಲೆ, ಜಗದೀಶ್ ರೈ ಗೋಪಿಸುರೇಶ್, ಶಶಿಕುಮಾರ್‌ರೈ, ದನುಕಾವೇರಪ್ಪ, ರಾಜು ರೈ, ಮುನಿಯಮ್ಮ, ಸೆೆಲ್ವಿ ಸುರೇಶ್, ಶ್ರೀ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಮಂಜುನಾಥ್ ಉಡುಪ, ಮುತ್ತಪ್ಪ ದೇವಾಲಯದ ಪೂಜಾರಿ ಶಿವಮಣಿ, ಇತರರು ಹಾಜರಿದ್ದರು.