ಪೆರಾಜೆ: ಕೊಡಗು ಜಿಲ್ಲಾ ಕೃಷಿ ಮೋರ್ಚಾದ ವತಿಯಿಂದ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಆಚರಣೆ ಪ್ರಯುಕ್ತ ಹಣ್ಣಿನ ಮರ, ಅರ್ಚನೆಗೆ ಉಪಯೋಗ ಆಗುವ ಗಿಡ ಹಾಗೂ ಆಯುರ್ವೇದಿಕ್ ಚಿಕಿತ್ಸಾ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಸಹಪ್ರಮುಖ್ ಚಿನ್ನಪ್ಪ ಅಡ್ಕ, ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಸುಭಾಷ್ ಚಂದ್ರ ಬಂಗಾರಕೋಡಿ, ಮಡಿಕೇರಿ ತಾಲೂಕು ಭಾಜಪ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ ಪದಾಧಿಕಾರಿಗಳಾದ ಧನಂಜಯ ಕೋಡಿ, ಪ್ರವೀಣ ಮಜಿಕೋಡಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ನಿರ್ದೇಶಕರಾದ ಅಶೋಕ ಪೆರುಮುಂಡ, ಕಿರಣ್ ಬಂಗಾರಕೋಡಿ, ದೀನರಾಜ್ ದೊಡ್ಡಡ್ಕ, ವಿವಿಧ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಪಕ್ಷದ ಕಾರ್ಯಕರ್ತರು ಇದ್ದರು.*ಗೋಣಿಕೊಪ್ಪ : ಬಲ್ಯಮುಂಡೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ತೆಂಗಿನ ಸಸಿ ನೆಡುವ ಮೂಲಕ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೇರ ಈಶ್ವರ್ ತಿಮ್ಮಯ್ಯ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು. ನಂತರ ಕಿಸಾನ್ ಯೋಜನೆಯಿಂದ ರೈತರಿಗೆ ಉಂಟಾಗುವ ಪ್ರಯೋಜನವನ್ನು ಶ್ಲಾಘಿಸಿ ಮತ್ತು ಹುಟ್ಟುಹಬ್ಬಕ್ಕೆ ಶುಭ ಕೋರಿ ಅಂಚೆ ಕಾರ್ಡನ್ನು ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಲು ಪೋಸ್ಟ್ ಮಾಡಲಾಯಿತು.
ಪಂಚಾಯಿತಿ ಸದಸ್ಯ ದೇಯಂಡ ಜಯಂತಿ, ಕೃಷಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಮಾಪಣಮಾಡ ಯಮುನಾ ಚಂಗಪ್ಪ, ಜಿಲ್ಲಾ ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್, ತಾಲೂಕು ಕೃಷಿ ಪ್ರಧಾನ ಕಾರ್ಯದರ್ಶಿ, ತೊರೀರ ವಿನು, ತಾಲೂಕು ಕೃಷಿ ಮೋರ್ಚಾ ಉಪಾಧ್ಯಕ್ಷ ಗುಡ್ಡಮಾಡ ಅಪ್ಪಿ, ಚಟ್ಟಮಾಡ ಅನಿಲ್, ಶಿವಚಾಳಿಯಂಡ ರಾಜೇಶ್ ತಾಲೂಕು ಕೃಷಿ ಮೋರ್ಚಾ ಕಾರ್ಯದರ್ಶಿ ಕೊಟ್ಟಂಗಡ ಅಯ್ಯಪ್ಪ, ಕರ್ತಮಾಡ ಎನ್ ಕಾವೇರಪ್ಪ, ಖಜಾಂಚಿ ಅಣ್ಣಮಾಡ ನವೀನ್ ಅಚ್ಚಯ್ಯ, ಹಾಗೂ ಸದಸ್ಯರುಗಳಾದ ಕಾಳಿಮಾಡ ಸೂರಜ್, ಗಾಡಂಗಡ ತಮ್ಮಯ್ಯ, ಸಿಲಾನ್, ಗ್ರಾಮಸ್ಥರುಗಳಾದ ಕೊಟ್ಟಂಗಡ ಪೆಮ್ಮಯ್ಯ, ಕೊಟ್ಟಂಗಡ ರೊಷನ್, ಬೂತ್ ಅಧ್ಯಕ್ಷ ದೇಯಂಡ ಅಯ್ಯಣ್ಣ, ಕೊಟ್ಟಂಗಡ ಸದಾಶಿವ, ಸಾಮಾಜಿಕ ಜಾಲತಾಣ ಸಂಚಾಲಕ ಚಟ್ಟಂಗಡ ಮಹೇಶ್ ಮಂದಣ್ಣ ಇದ್ದರು.