ಪಿ.ಟಿ. ಉಷಾ
*ಗೋಣಿಕೊಪ್ಪ, ಸೆ. ೨೮: ಕ್ರೀಡಾ ಪಟುಗಳು ಉದ್ದೀಪನಾ ಮದ್ದು ಸೇವನೆ ಮಾಡಿದರೆ ದೇಶಕ್ಕೆ ಕೆಟ್ಟ ಹೆಸರು ಎಂದು ಅಂತರ‍್ರಾಷ್ಟಿçÃಯ ಓಟಗಾರ್ತಿ ಹಾಗೂ ರಾಜ್ಯಸಭಾ ಸದಸ್ಯೆ ಡಾ. ಪಿ.ಟಿ. ಉಷಾ ಹೇಳಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಾಲಿಬೆಟ್ಟದ ಕೂರ್ಗ್ ಕ್ಲಿಫ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡೆಯಲ್ಲಿ ಅಡ್ಡದಾರಿಗೆ ಅವಕಾಶವಿಲ್ಲ. ತರಬೇತಿ ಹಾಗೂ ಶ್ರಮ ಮಾತ್ರ ಶಾಶ್ವತ ಹಾಗೂ ಪ್ರಸಿದ್ಧಿ ತರಲಿದೆ. ನಿಷೇಧಕ್ಕೆ ಒಳಗಾದರೆ ಅವಕಾಶ ವಂಚಿತರಾಗಬೇಕಾಗುತ್ತದೆ. ಇದರಿಂದ ನೈಜ ಪ್ರತಿಭೆಗಳು ದೂರ ಉಳಿಯುವ ಪರಿಸ್ಥಿತಿ ನಿರ್ಮಾಣ ವಾಗಲಿದೆ. ಉದ್ದೀಪನಾ ಮದ್ದು ಸೇವನೆ ದುಷ್ಪರಿಣಾಮಗಳ ಬಗ್ಗೆ ಪ್ರಾಥಮಿಕ ಹಂತದಲ್ಲಿ ಅರಿವು ಮೂಡಿಸಬೇಕು. ಇದರಲ್ಲಿ ಪೋಷಕರು, ಶಿಕ್ಷಕರು ಹಾಗೂ ತರಬೇತುದಾರರ ಪಾತ್ರ ಮುಖ್ಯ ಎಂದರು. ಗ್ರಾಮೀಣ ಭಾಗದ ಕ್ರೀಡಾಪಟು ಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಪೋಷಕರು ಮನೆಯಲ್ಲಿ ಮಕ್ಕಳೊಂದಿಗೆ ಅವರಿಗೆ ಆಸಕ್ತಿಯಿರುವ ಕ್ರೀಡೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ಅರಿವು ಮೂಡಿಸಬೇಕು. ಕೆಲವು ಸಂದರ್ಭ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಾಗ ಶೈಕ್ಷಣಿಕ ಪ್ರಗತಿಯಲ್ಲಿ ಏರುಪೇರಾಗಿರುವ ಉದಾಹರ ಣೆಗಳಿವೆ. ಕ್ರೀಡೆಯಲ್ಲಿ ತೊಡಗಿಸಿ ಕೊಂಡಿರುವ ಮಕ್ಕಳ ಕುಟುಂಬದವರು ಹಾಗೂ ಸಂಬAಧಿಕರು ಮಕ್ಕಳಿಗೆ ಕ್ರೀಡೆಗಳ ಬಗ್ಗೆ ಇರುವ ಉತ್ಸಾಹ ಹಾಗೂ ಶಿಕ್ಷಣವನ್ನು ಉತ್ತಮ ದೃಷ್ಟಿಯಿಂದ ಕಾಣಬೇಕು. ಕ್ರೀಡೆ ಹಾಗೂ ಶಿಕ್ಷಣ ಓಟ್ಟಾಗಿ ಸಾಗಬೇಕಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಾಜರಾತಿ ಕಡಿಮೆ ಯಿರುವ ಕ್ರೀಡಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಗಳನ್ನು ಆಯೋಜಿಸಿ ಹೆಚ್ಚು ಅಂಕ ಗಳನ್ನು ಪಡೆಯಲು ಪ್ರಯತ್ನಿಸಬೇಕು. ಇದರಿಂದ ಪೋಷಕರಲ್ಲಿ ಕೂಡಾ ಆತ್ಮಸ್ಥೆöÊರ್ಯ ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.
ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಹೆಚ್ಚಿನ ಅವಧಿಯ ತರಬೇತಿ ನೀಡುವ ಕೆಲಸ ಎಲ್ಲಾ ರಾಜ್ಯಗಳಲ್ಲಿ ಆಗಬೇಕಿದೆ. ಇದರಿಂದ ಸೂಕ್ತ ಮಾರ್ಗದರ್ಶನ ಹಾಗೂ ಅಂತರ‍್ರಾಷ್ಟಿçÃಯ ಮಟ್ಟದಲ್ಲಿ ಭಾಗವಹಿಸುವ ಹಾಗೂ ಪದಕ ಪಡೆಯುವ ಕ್ರೀಡಾಪಟುಗಳನ್ನು ತಯಾರಿಸಲು ಸಾಧ್ಯವಿದೆ ಎಂದರು.
ಕೇAದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುತ್ತಿದೆ. ತರಬೇತಿ ಗುಣಮಟ್ಟ ಹೆಚ್ಚಿಸಲಾಗಿದೆ. ಮಸಾಜ್ ಹಾಗೂ ಫಿಸಿಯೋಥೆರಪಿ ಸೌಲಭ್ಯ ಒದಗಿಸಲಾಗುತ್ತಿದೆ. ಖೇಲೊ ಇಂಡಿಯಾದಲ್ಲಿ ನೈಜ ಕ್ರೀಡಾಪಟು ಗಳಿಗೆ ಅವಕಾಶ ದೊರೆತಾಗ ಏಷ್ಯಾ ಮಟ್ಟದ ಕ್ರೀಡಾಕೂಟದಲ್ಲಿ ಹೆಚ್ಚು ಅವಕಾಶ ದೊರೆಯುತ್ತದೆ. ಇದರಿಂದ ಪೈಪೋಟಿ ಕೂಡ ಹೆಚ್ಚಾಗಲಿದೆ ಎಂದರು. ರಾಜ್ಯಸಭಾ ಸದಸ್ಯೆಯಾಗಿ (ನಾಮ ನಿರ್ದೇಶಿತ) ಆಯ್ಕೆಯಾಗಿರುವುದು ಅಥ್ಲೆಟ್‌ಗಳಿಗೆ ನೀಡಿದ ಗೌರವ ಎಂದು ಭಾವಿಸಿದ್ದೇನೆ. ಕೇರಳ ರಾಜ್ಯದಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಸ್ಥಾಪನೆಯಿಂದ ನಿವೃತ್ತಿ ನಂತರವೂ ಸಮಾಜ ಗುರುತಿಸುವಂತೆ ಮಾಡಿದೆ. ಮಕ್ಕಳಿಗೆ ಗುಣಮಟ್ಟದ ತರಬೇತಿ ದೊರೆಯುತ್ತಿದೆ. ವಿವಿಧ ರಾಜ್ಯಗಳ ಮಕ್ಕಳು ಆಯ್ಕೆಯಾಗಿದ್ದಾರೆ. ಪ್ರತಿ ವರ್ಷ ಫೆಬ್ರವರಿ ತಿಂಗಳಿನಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ತಿತಿತಿ.ಠಿಣushಚಿ.oಡಿg ಮೂಲಕ ಹೆಚ್ಚಿನ ಮಾಹಿತಿ ಪಡೆದುಕೊಳ್ಳ ಬಹುದು. ತರಬೇತಿ ಸಂಪೂರ್ಣ ಉಚಿತವಾಗಿ ನಡೆಸುವ ಮೂಲಕ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದರು.
ಸAವಾದ ಸಂಚಾಲಕ ವಿ. ವಿ. ಅರುಣ್‌ಕುಮಾರ್, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್, ಪ್ರ. ಕಾರ್ಯದರ್ಶಿ ಎನ್. ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ನಿರ್ದೇಶಕ ರಾದ ಚಿಮ್ಮಣಮಾಡ ದರ್ಶನ್, ಜಗದೀಶ್ ಜೋಡುಬೀಟಿ ಇದ್ದರು.