ಪ್ರಧಾನ ದೇವದೂತರು ಗಳಲ್ಲಿ ೭ ದೇವದೂತರು ಗಳಿದ್ದಾರೆ. ಅವರಲ್ಲಿ ಸರ್ವ ಪ್ರಥಮವಾಗಿ ಸ್ವರ್ಗದ ಆತಿಥೇಯರ ರಾಜ ಕುಮಾರ ಸಂತ ಮೈಕಲರು.
ಶಕ್ತಿ ಶಾಲಿಯಾದ ಸ್ವರ್ಗದ ಆತಿಥೇಯರ ರಾಜಕುಮಾರ ಸಂತ ಮೈಕಲರು. ಈ ಜಗತ್ತಿನಲ್ಲಿ ದೈನಂದಿನ ಪ್ರಲೋಭನೆಗಳ ವಿರುದ್ಧದ ಹೋರಾಟಗಳಲ್ಲಿ ನಮ್ಮನ್ನು ರಕ್ಷಿಸುತ್ತಾರೆ. ಎಲ್ಲಾ ಕೆಟ್ಟದ್ದನ್ನು ನಿವಾರಿಸಲು ಮತ್ತು ನಮ್ಮನ್ನು ಬಲಪಡಿಸಲು ನಮಗೆ ಸಹಾಯ ಮಾಡುತ್ತಾರೆ. ಆದುದ್ದರಿಂದ ಘೋಷಿಸಲು ನೆರವಾಗುತ್ತಾರೆ. ಇದರಿಂದಾಗಿ ಸ್ವರ್ಗದಲ್ಲಿರುವ ಎಲ್ಲಾ ದೇವದೂತರು ಮತ್ತು ಸಂತರೊAದಿಗೆ ನಾವು ಭಗವಂತನನ್ನು ಮಹಿಮೆಪಡಿಸಲು ಸಾಧ್ಯವಾಗುತ್ತದೆ.
ಸಂತ ಮೈಕಲರ ಹಬ್ಬ ಮೊದಲ ಬಾರಿಗೆ ಸೆಪ್ಟೆಂಬರ್ ೨೯ ರಂದು ಪ್ರಿಜಿಯಾದಲ್ಲಿ ಪ್ರಾರಂಭವಾಯಿತು. ಅವರ ಸ್ವರೂಪವನ್ನು ಅವರ ಕೈಯಲ್ಲಿ ಈಟಿ ಹಿಡಿದು ಸೈತನನನ್ನು ತನ್ನ ಪಾದದಲ್ಲಿ ತುಳಿದು ನರಕದ ಬೆಂಕಿಗೆ ದಬ್ಬುವ ರೀತಿಯಲ್ಲಿ ಚಿತ್ರಿಸಲಾಗಿ ಇವರು ಪ್ರಧಾನ ದೂತರಲ್ಲಿ ಒಬ್ಬರು. ಇವರು ಮರಣ ಹೊಂದಿ ಮನುಷ್ಯರ ಆತ್ಮಗಳನ್ನು ಸೈತಾನನ ಶೋಧನೆ ಒಳಗಾಗದಂತೆ ಅವರಿಗೆ ಸ್ವರ್ಗದಾರಿಯನ್ನು ತೋರಿಸುವ ಮಾರ್ಗದರ್ಶಕರಾಗಿ, ಸರ್ವೇಶ್ವರ ಸ್ವಾಮಿಯ ಬಳಿ ತಲುಪಿಸುವವರಾಗಿದ್ದಾರೆ. ಆದ್ದರಿಂದ ಇವರನ್ನು ಸ್ವರ್ಗದ ಆತಿಥೇಯರ ರಾಜಕುಮಾರರೆಂದು ಕರೆಯುತ್ತಾರೆ. ಇವರು ಸ್ವರ್ಗದ ಬಾಗಿಲು ಕಾವಲುಗಾರರಾಗಿದ್ದಾರೆ.
ಸಿನಾಯ್ ಬೆಟ್ಟದಲ್ಲಿ ಮೋಶೆಗೆ ಸರ್ವೇಶ್ವರ ಸ್ವಾಮಿಯು ೧೦ ಆಜ್ಞೆಗಳನ್ನು ತನ್ನ ಜನರಿಗೆ ತಲುಪಿಸಲು ಹೇಳಿದ ಸಂದರ್ಭದಲ್ಲಿ ಸೈತಾನನು ಅದನ್ನು ತಪ್ಪಿಸಲು ಬಂದಾಗ; ಸಂತ ಮೈಕಲರು ಮೋಶೆಗೆ ನೆರವಾಗಿ ಸೈತಾನನ ಪ್ರಲೋಭನೆಯಿಂದ ರಕ್ಷಿಸಿ, ಆ ಆಜ್ಞೆಗಳನ್ನು ದೇವ ಜನರಿಗೆ ತಲುಪಿಸಲು ನೆರವಾಗಿರುತ್ತಾರೆ.
ಸ್ವರ್ಗದಲ್ಲಿ ಸರ್ವೇಶ್ವರ ಸ್ವಾಮಿಯ ವಿರುದ್ಧ ಲೂಸಿಫರ್ ಮತ್ತು ಅವನ ಸೈನ್ಯ ಹೋರಾಡಲು ನಿಂತಾಗ, ಸ್ವರ್ಗೀಯಗಣಗಳ ನಾಯಕರಾದ ಸಂತ ಮೈಕಲರು ಅವರ ಸೈನ್ಯದೊಂದಿಗೆ ಸೈತಾನನ ವಿರುದ್ಧ ಹೋರಾಡಿ ಸ್ವರ್ಗದಿಂದ ಅವರನ್ನು ಬಹಿಷ್ಕರಿಸಿ ನರಕದ ಬೆಂಕಿಗೆ ದಬ್ಬುತ್ತಾರೆ.
ಸಂತ ಮೈಕಲರು ಬೆಟ್ಟಗಳಲ್ಲಿ ವಾಸಿಸುವ ದೂತರಾಗಿದ್ದಾರೆ. ಏಕೆಂದರೆ ಒಮ್ಮೆ ಸಿಫಾಂಟೂ ಎಂಬ ನಗರದ ಧನಿಕನು ಅವನ ಎತ್ತು ಹಾಗೂ ಹಸುಗಳನ್ನು ಗಾರ್ಗ್ಯಾನೊ ಎಂಬ ಬೆಟ್ಟದಲ್ಲಿ ಮೇಯಲು ಬಿಟ್ಟಿರುತ್ತಾನೆ. ಅದರಲ್ಲಿ ಒಂದು ಎತ್ತು ತನ್ನ ಗುಂಪನ್ನು ಬಿಟ್ಟು ಬೆಟ್ಟದ ಕಡೆ ಓಡುತ್ತಿದುದ್ದನ್ನು ನೋಡಿದ ಧನಿಕನು ಅದನ್ನು ತಪ್ಪಿಸಲು ತನ್ನ ಜನರೊಂದಿಗೆ ಅದರ ಕಡೆಗೆ ಬಾಣಗಳನ್ನು ಬಿಡುತ್ತಾನೆ. ಆದರೆ ಬಿಟ್ಟ ಬಾಣವು ಆಶ್ಚರ್ಯಕರವಾಗಿ ಧನಿಕ ಮತ್ತು ಜನರ ಕಡೆಗೆ ಮರಳಿ ಬರುತ್ತದೆ. ಇದನ್ನು ನೋಡಿ ಬೆರಗಾದ ಜನರು ತಮ್ಮ ಧರ್ಮಾಧ್ಯಕ್ಷರ ಬಳಿ ಹೋಗಿ ವಿಷಯವನ್ನು ತಿಳಿಸುತ್ತಾರೆ. ಧರ್ಮಾಧ್ಯಕ್ಷರು ಇದನ್ನು ಕೇಳಿ ಸರ್ವೇಶ್ವರ ಸ್ವಾಮಿಯಲ್ಲಿ ಮೂರು ದಿನಗಳ ಕಾಲ ಸತತವಾಗಿ ಉಪವಾಸ ಮತ್ತು ಪ್ರಾರ್ಥನೆಯನ್ನು ಕೈಗೊಳ್ಳುತ್ತಾರೆ. ಮೂರನೇಯ ದಿನ ಸಂತ ಮೈಕಲರು ಪ್ರತ್ಯಕ್ಷರಾಗಿ ಈ ಬಾರಿ ನೀವೂ ದೇವರಲ್ಲಿ ಸರಿಯಾದ ರೀತಿ ಉತ್ತರ ಕೇಳಿರುವಿರಿ. ನೀವು ಬಿಟ್ಟ ಬಾಣ ಮರಳಿ ನಿಮಗೆ ಬಂದದ್ದು ನನ್ನ ಇಚ್ಛೆಯಿಂದಲೇ ಎಂದು ಉತ್ತರಿಸಿ ನಾನೇ ಪ್ರಧಾನ ದೂತರಾದ ಸಂತ ಮೈಕಲ್ ಹಾಗೂ ನಾನಿರುವಲ್ಲಿ ಸದಾ ದೇವರ ಸಾನಿಧ್ಯ ಇರುತ್ತದೆ. ಈ ಬೆಟ್ಟದಲ್ಲಿರುವ ಗುಹೆಯು ನನಗೆ ಪವಿತ್ರವಾದದ್ದು ಹಾಗೂ ನಾನು ಇಲ್ಲಿರುವ ಪ್ರತಿಯೊಂದು ಜೀವಿಯನ್ನು ಸಂರಕ್ಷಿಸಲು ನೆಲೆಸಿದ್ದೇನೆ. ಇಲ್ಲಿಗೆ ಬಂದ ಮನುಷ್ಯರ ಪಾಪಗಳು ಕ್ಷಮಿಸಲ್ಪಡುತ್ತದೆ. ದೇವರ ಬಳಿ ಕೇಳಿದ್ದನ್ನು ಕರುಣಿಸಲ್ಪಡುತ್ತದೆ ಹಾಗೂ ಹೇಗೆ ನಾನು ಎತ್ತನ್ನು ಬಾಣಗಳಿಂದ ಸಂರರ್ಷಿಸಿದ್ದೇನೋ ಹಾಗೆಯೇ ಸೈತಾನನ ಪ್ರಲೋಭನೆಗಳಿಂದ ನಿಮ್ಮನ್ನು ಸಂರಕ್ಷಿಸುತ್ತೇನೆ ಎಂದು ಹೇಳಿದರು. ಅನಂತರ ಸಂತ ಮೈಕಲರು ಧರ್ಮಾಧ್ಯಕ್ಷರಿಗೆ ಆ ಗುಹೆಯಲ್ಲಿ ಬಲಿಪೀಠವನ್ನು ನಿರ್ಮಿಸಿ ದೇವರನ್ನು ಸ್ತುತಿಸಲು ಸೂಚಿಸುತ್ತಾರೆ. ಆದರೆ ಧರ್ಮಾಧ್ಯಕ್ಷರೂ ಬಲಿಪೀಠ ನಿರ್ಮಿಸುವಲ್ಲಿ ವಿಳಂಬ ಮಾಡಿದ ಸಮಯದಲ್ಲಿ ಅವರ ನಗರ ಮೇಲೆ ಬೇರೆ ರಾಜ್ಯದವರೂ ದಾಳಿ ನಡೆಸಲು ಮುಂದಾಗಿರುತ್ತಾರೆ. ಆ ಸಂದರ್ಭದಲ್ಲಿ ಧರ್ಮಾಧ್ಯಕ್ಷರು ಪುನಃ ಉಪವಾಸ ಮತ್ತು ಪ್ರಾರ್ಥನೆಯನ್ನು ಕೈಗೊಳ್ಳುತ್ತಾರೆ. ಇದರ ಫಲವಾಗಿ ಸಂತ ಮೈಕಲರು ೨ನೇ ಬಾರಿ ಪ್ರತ್ಯಕ್ಷರಾಗಿ ಧರ್ಮಾಧ್ಯಕ್ಷರ ಕೋರಿಕೆಯಂತೆ ತಾವೇ ಸ್ವತಃ ಯುದ್ಧದಲ್ಲಿ ಪಾಲ್ಗೊಂಡು ಇವರನ್ನು ಸಂರಕ್ಷಿಸುತ್ತಾರೆ.
ಈ ಘಟನೆ ಸಂಭವಿಸಿದ ನಂತರ ಧರ್ಮಾಧ್ಯಕ್ಷರೂ ತಮ್ಮ ಜನರೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಆ ಗುಹೆಗೆ ತೆರಳುತ್ತಾರೆ. ಆ ಸಂದರ್ಭದಲ್ಲಿ ಸಂತ ಮೈಕಲರು ೩ನೇ ಬಾರಿ ಪ್ರತ್ಯಕ್ಷರಾಗಿ ಧಮಾಧ್ಯಕ್ಷರಿಗೆ ಹೀಗೆನ್ನುತ್ತಾರೆ. ‘ನಾನು ಕಟ್ಟಿರುವ ಬಸಿಲಿಕವನ್ನು ಸ್ವತಃ ನಾನೇ ಪವಿತ್ರೀಕರಿಸಿರುತ್ತೇನೆ. ಇಲ್ಲಿಗೆ ಬಂದ ಜನರಿಗೆ ಸಂರಕ್ಷಣೆಯೂ ದೊರೆಯುವುದು. ತದನಂತರ ಧರ್ಮಾಧ್ಯಕ್ಷರು ಜನರೆಲ್ಲರೂ ಸೇರಿ ಪ್ರಥಮ ಬಲಿಪೂಜೆಯನ್ನು ಅರ್ಪಿಸುತ್ತಾರೆ. ಈ ಬಸಿಲಿಕ ಸೆಲಿಸ್ಟಿಯಲ್ ಬಸಿಲಿಕಾ ಎಂದು ಹೆಸರುವಾಸಿಯಾಗಿದೆ. ಈ ಬಸಿಲಿಕ ಇರುವ ಮೌಂಟ್ ಗಾರ್ಗ್ಯಾನೋ ಎಂಬ ಬೆಟ್ಟ ಈಗ ಮೌಂಟ್ ಸೈಂಟ್ ಏಂಜಲೊ ಎಂದು ಪ್ರಸಿದ್ಧವಾಗಿದೆ.
ಈ ಘಟನೆ ಸಂಭವಿಸಿ ಶತಮಾನಗಳು ಕಳೆದ ನಂತರ ದಕ್ಷಿಣ ಇಟಲಿಯಲ್ಲಿ ಪ್ಲೇಗ್ ರೋಗ ಆವರಿಸಿಕೊಂಡಾಗ, ಅಲ್ಲಿಯ ಧರ್ಮಾಧ್ಯಕ್ಷರು ಉಪವಾಸ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಆ ಸಂದರ್ಭದಲ್ಲಿ ಕೊನೆಯದಾಗಿ ಮತ್ತು ೪ನೇ ಬಾರಿ ಧರ್ಮಾಧ್ಯಕ್ಷರಿಗೆ ಸಂತ ಮೈಕಲರು ಕಾಣಿಸಿಕೊಂಡು ಆ ಬಸಿಲಿಕಾದಲ್ಲಿರುವ ಕಲ್ಲುಗಳಲ್ಲಿ ಒ.ಂ. ಎಂದರೆ ಮೈಕಲ್ ದ ಅರ್ಕ್ ಏಂಜಲ್’ ಎಂದು ಬರೆದು ಅದನ್ನು ಅಲ್ಲಿಟ್ಟು ಪ್ರಾರ್ಥಿಸಿ ರೋಗ ಪೀಡಿತರಿಗೆ ಕೊಡಲು ಹೇಳುತ್ತಾರೆ. ಹಾಗೇ ಮಾಡಿದ ನಂತರ ಜನರೆಲ್ಲರೂ ಪ್ಲೇಗ್ ರೋಗದಿಂದ ಗುಣಮುಖರಾಗಿರುತ್ತಾರೆ ಎಂಬ ನಂಬಿಕೆ ಇದೆ.
ಇದರಿಂದ ನಂತರದ ದಿನಗಳಲ್ಲಿ ಅವರ ಅದ್ಭುತ ಕಾರ್ಯಗಳು ಜಗತ್ತಿನೆಲ್ಲೆಡೆ ಹರಡುತ್ತದೆ. ಆದರಿಂದ ಸಂತ ಮೈಕಲರು ನಮ್ಮ ಪ್ರಾರ್ಥನೆಗಳಿಗೆ ಬೇಗನೇ ಉತ್ತರಿಸುವ ದೂತರಾಗಿರುತ್ತಾರೆ. ನಮ್ಮ ಚಿಕ್ಕ ಪುಟ್ಟ ಕೋರಿಕೆಗಳನ್ನು ಸಹ ಈಡೇರಿಸುವವರಾಗಿದ್ದಾರೆ. ಆದರಿಂದ ಇವರಲ್ಲಿ ಭಕ್ತಿಯಿಂದ ಕೇಳಿಕೊಂಡ ಕಾರ್ಯ ಸದಾ ನೇರವೇರುತ್ತದೆ. ಸರ್ವರಿಗೂ ಸಂತ ಮೈಕಲರ ಕೃಪಾರ್ಶಿವಾದವು ಹಾಗೂ ಅವರ ಸಂರಕ್ಷಣೆಯೂ ಎಲ್ಲಾ ಕುಟುಂಬಗಳ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.
-ಎಲಿಜಾ ಎ.ವಿ.