ಮಡಿಕೇರಿ, ಸೆ. ೨೭: ಮೂರ್ನಾಡು ಪದವಿ ಪೂರ್ವ ಕಾಲೇಜಿನ, ರಾಷ್ಟಿçÃಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ ತಾ. ೨೮ ರಿಂದ ಅ. ೪ ರವರೆಗೆ ಹೊದ್ದೂರು ವಾಟೆಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಇಂದು ನಡೆಯಲಿರುವ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಜಿ. ಮಾದಪ್ಪ ವಹಿಸಲಿದ್ದು, ವಿದ್ಯಾಸಂಸ್ಥೆ ನಿರ್ದೇಶಕರು, ಕ್ಲೀನ್ ಇಂಡಿಯಾ ಬ್ರಿಗೇಡ್ ಯೋಜನಾ ನಿರ್ದೇಶಕ ಎನ್.ಪಿ. ರಾಜಾ ಮಾದಪ್ಪ ಧ್ವಜಾರೋಹಣ ಮಾಡಲಿದ್ದಾರೆ.

ಉದ್ಘಾಟನೆಯನ್ನು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕುಸುಮಾವತಿ ಅವರು ಮಾಡಲಿದ್ದು; ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯ ವಾಂಚೀರ ರನ್ನ ಅಜಯ್‌ಕುಮಾರ್, ವಿದ್ಯಾಸಂಸ್ಥೆ ಕಾರ್ಯದರ್ಶಿ ವೇಣು ಅಪ್ಪಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ, ಶಾಲಾ ಮುಖ್ಯ ಶಿಕ್ಷಕಿ ದಮಯಂತಿ ಹೆಚ್.ಎಸ್. ಅವರುಗಳು ಭಾಗವಹಿಸಲಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ ತಿಳಿಸಿದ್ದಾರೆ.