ಮಡಿಕೇರಿ, ಸೆ.೨೭: ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದ್ದು, ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆ ಗಳನ್ನು ರೂಪಿಸಿಕೊಳ್ಳಬೇಕೆಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಲಹೆ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರ ಸಂಯುಕ್ತ ಆಶ್ರÀ್ರಯದಲ್ಲಿ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ವಿಶ್ವದಲ್ಲಿ ಹಲವಾರು ರಾಷ್ಟçಗಳು ಪ್ರವಾಸೋದ್ಯಮದಿಂದಲೇ ಆಡಳಿತ ನಡೆಸುತ್ತಿವೆ. ಸಿಂಗಾಪುರ, ಮಲೇಶಿಯಾ ಮುಂತಾದ ರಾಷ್ಟçಗಳಿಗೆ ಪ್ರವಾಸೋದ್ಯಮವೇ ಮೂಲ ಆದಾಯವಾಗಿದೆ. ಕೊಡಗು ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು, ಉದ್ಯಮಕ್ಕೆ ಸಂಬAಧಿಸಿದAತೆ ಇರುವ ಸಂಘ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕಿದೆ. ಕಾಫಿ, ಕರಿಮೆಣಸು, ಏಲಕ್ಕಿ ಬೆಲೆ ಹಾಗೂ ಬೆಳೆ ನೆಲಕಚ್ಚಿದ್ದು, ಬೆಳೆಗಾರರು ಸಾಲ ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಬೇಕಾಗಿದೆ. ತಾನು ಸಚಿವನಾಗಿದ್ದಾಗ ಕುಶಾಲನಗರದಲ್ಲಿ ಬೆಳೆಗಾರರು ಸಾಲ ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಬೇಕಾಗಿದೆ. ತಾನು ಸಚಿವನಾಗಿದ್ದಾಗ ಕುಶಾಲನಗರದಲ್ಲಿ ಹೊಟೇಲ್‌ಗಳಿದ್ದರೂ ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಎಲ್ಲರೂ ಒಟ್ಟಾಗಿ ಸೇರಿ

(ಮೊದಲ ಪುಟದಿಂದ) ಚರ್ಚೆ ಮಾಡಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವದಲ್ಲದೆ, ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಆಚರಣೆಗೆ ಮೀಸಲಾಗಬಾರದು

ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ; ಪ್ರವಾಸೋದ್ಯಮ ದಿನಾಚರಣೆ ಕೇವಲ ಆಚರಣೆಗೆ ಮೀಸಲಿಡದೆ ಕಾರ್ಯರೂಪಕ್ಕೆ ತರಬೇಕು. ದಿನದ ಅಂಗವಾಗಿ ಇಂದು ಬೆಳಿಗ್ಗೆ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಈ ಕಾರ್ಯವನ್ನು ನಗರಸಭೆ ಮಾಡಬೇಕೆಂದು ಕಾಯದೆ ಎಲ್ಲರೂ ಕೈಜೋಡಿಸಬೇಕು. ನಮ್ಮ ಮನೆಯಿಂದಲೇ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಂಡರೆ ಯಾರಿಗೂ ತೊಂದರೆ ಆಗಲ್ಲ ಎಂದು ಹೇಳಿದರು. ಕೆಲವರು ಹೋಂಸ್ಟೇಗಳ ಕಸಗಳನ್ನು ತಂದು ರಸ್ತೆ ಬದಿ ಹಾಕುತ್ತಾರೆ. ಇದು ತಪ್ಪು, ಕಸಗಳನ್ನು ಮನೆಯಲ್ಲಿಯೇ ವಿಂಗಡಿಸಿದರೆ ಅನುಕೂಲವಾಗಲಿದೆ. ಆದಷ್ಟು ಪ್ಲಾಸ್ಟಿಕ್, ಇನ್ನಿತರ ವಸ್ತುಗಳನ್ನು ಬಳಕೆ ಮಾಡುವದನ್ನು ಕಡಿಮೆ ಮಾಡಿ ಕಸ ಉತ್ಪನ್ನ ಕಡಿಮೆ ಮಾಡಿದರೆ ಇನ್ನೂ ಉತ್ತಮ ಎಂದರು. ನಗರ ವ್ಯಾಪ್ತಿಯಲ್ಲಿ ಅನಧಿಕೃತ ಹೋಸ್ಟೇಗಳು ಇದ್ದು, ಏನಾದರೂ ಸಮಸ್ಯೆ ಎದುರಾದರೆ ನಗರಸಭೆಗೂ ಕೆಟ್ಟ ಹೆಸರು ಬರಲಿದೆ. ಪ್ರವಾಸೋದ್ಯಮಕ್ಕೂ ನಷ್ಟವಾಗಲಿದೆ ಎಂದು ಹೇಳಿದ ಅವರು, ಉದ್ಯಾನವನಗಳನ್ನು ಖಾಸಗಿಯವರಿಗೆ ವಹಿಸುವ ಸಂಬAಧ ಯಾರಾದರೂ ಮುಂದೆ ಬಂದಲ್ಲಿ ಪರಿಗಣನೆ ಮಾಡಲಾಗುವದು ಎಂದು ಹೇಳಿದರು.

ಪ್ರವಾಸೋದ್ಯಮ ಐಸಿಯುನಲ್ಲಿದೆ

ಪ್ರವಾಸೋದ್ಯಮ ಅವಲಂಬಿತರ ಕೂಟದ ಅಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್ ಮಾತನಾಡಿ, ಇದೊಂದು ನಾಮಕಾವಸ್ಥೆಯ ಕಾರ್ಯಕ್ರಮವಾಗಿದ್ದು, ಪ್ರವಾಸೋದ್ಯಮ ಅವಲಂಬಿತರು ಯಾರೂ ಕೂಡ ಸಂತೋಷದಲ್ಲಿಲ್ಲ, ಪ್ರವಾಸೋದ್ಯಮ ಐಸಿಯುನಲ್ಲಿದೆ. ಎಲ್ಲರು ತತ್ತರಿಸಿ ಹೋಗಿದ್ದು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಆಸಕ್ತಿ ಇಲ್ಲ, ಪ್ರವಾಸೋದ್ಯಮ ಇಲಾಖೆ ನಾಮಕಾವಸ್ಥೆಗೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಶೇ.೮೦ರಷ್ಟು ಮಂದಿ ಪ್ರವಾಸೋದ್ಯಮ ಅವಲಂಬಿತರಿದ್ದಾರೆ. ರೈತರು, ಪ್ರತಿಯೊಂದು ಅಂಗಡಿಯವರು ಕೂಡ ಅವಲಂಬಿತರೇ, ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ಒಂದಿಷ್ಟು ವ್ಯಾಪಾರದೊಂದಿಗೆ ಎಲ್ಲರ ಆರ್ಥಿಕ ಅಭಿವೃದ್ಧಿ ಆಗಲಿದೆ. ಆದರೆ, ಇಲಾಖೆ, ಪ್ರತಿನಿಧಿಗಳಿಂದ ಯಾವದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬAಧ ಯಾವದೇ ಚಟುವಟಿಕೆಗಳಿಲ್ಲ, ರಸ್ತೆಗಳೂ ಸರಿಯಾಗಿಲ್ಲ. ಇನ್ನಾದರೂ ಸಭೆ ನಡೆಸಿ ಕಾರ್ಯಕ್ರಮ ರೂಪಿಸುವಂತಾಗಲಿ ಎಂದು ಹೇಳಿದರು.

ದಲ್ಲಾಳಿಗಳ ಹಾವಳಿ

ಹೊಟೇಲ್ ಉದ್ಯಮಿಗಳ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರಪ್ರಸಾದ್ ಮಾತನಾಡಿ; ಕೊಡಗು ಪುಟ್ಟ ಜಿಲ್ಲೆಯಾಗಿದ್ದು, ಸ್ವಾಭಾವಿಕ ಪರಿಸರದಿಂದ ಕೂಡಿದೆ. ೨೦ವರ್ಷಗಳ ಹಿಂದೆ ಇಲ್ಲಿ ಯಾವದೇ ಚಟುವಟಿಕೆಗಳಿರಲಿಲ್ಲ, ಇದೀಗ ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತಿದ್ದು, ಸರಕಾರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ೧.೫೦ಲಕ್ಷ ಮಂದಿ ಪ್ರವಾಸೋದ್ಯಮ ಅವಲಂಬಿತರಿದ್ದು, ಕೊಡಗನ್ನು ಮೇಲೆತ್ತುವ ಕಾರ್ಯ ಆಗಬೇಕಿದೆ. ಸ್ಥಳ ಮಾಹಿತಿ ಫಲಕ, ಪ್ರವಾಸಿ ಮಾಹಿತಿ ಕೇಂದ್ರ ನಿರ್ಮಾಣವಾಗಬೇಕಿದೆ, ಅನಧಿಕೃತ ಹೋಂಸ್ಟೇಗಳ ಮೇಲೆ ಕ್ರಮ ಕೈಗೊಳ್ಳಬೇಕಿದ್ದು, ದಲ್ಲಾಳಿಗಳ ಹಾವಳಿಯಿಂದಾಗಿ ಪ್ರವಾಸೋದ್ಯಮ ಅವಲಂಬಿತರಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೌರಾಯುಕ್ತ ವಿಜಯ, ಹೋಂಸ್ಟೇ ಅಸೋಸಿಯೇಶನ್ ಅಧ್ಯಕ್ಷ ಭರತ್ ಇದ್ದರು. ಸಂತ ಮೈಕಲರ ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರೆ, ಪ್ರವಾಸೋದ್ಯಮ ಇಲಾಖಾ ಪ್ರಭಾರ ಉಪನಿರ್ದೇಶಕ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಸ್ವಾಗತಿಸಿದರು. ಪ್ರಾಂಶುಪಾಲ ಕೆ.ಜೆ.ದಿವಾಕರ್ ನಿರೂಪಿಸಿದರು.