ಮಡಿಕೇರಿ, ಸೆ. ೨೭: ಕೊಡಗರಹಳ್ಳಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟ ಮುಸ್ತಾಫ ಅವರ ಕುಟುಂಬಕ್ಕೆ ಇತ್ತೀಚಿಗೆ ಸುಂಟಿಕೊಪ್ಪ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಟಾಟಾ ಎ.ಐ. ಜಿ. ವಿಮೆ ಸಂಸ್ಥೆ ವತಿಯಿಂದ ರೂ. ೫ ಲಕ್ಷ ಮೊತ್ತದ ವಿಮೆ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭ ಪ್ರಾದೇಶಿಕ ಮುಖ್ಯಸ್ಥ ದೇವಿಪ್ರಸಾದ್ ಶೆಟ್ಟಿ, ಕ್ರೆಡಿಟ್ ವಿಭಾಗದ ಅನಂತ್ ಫೈಲರ್, ಪ್ರಧಾನ ವ್ಯವಸ್ಥಾಪಕ, ಲಕ್ಷಿö್ಮಕಾಂತ್, ಹಿರಿಯ ವ್ಯವಸ್ಥಾಪಕರಾದ ಸಿ. ದೀಪ್ತಿ, ಜಂಟಿ ವ್ಯವಸ್ಥಾಪಕ ಚಂದ್ರಶೇಖರ್ ರೆಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.