ಕೂಡಿಗೆ, ಸೆ. ೨೭: ಕೂಡಿಗೆಯಲ್ಲಿರುವ ಯೂನಿಯನ್ ಬ್ಯಾಂಕ್ ಗ್ರಾಮೀಣಾಭಿವೃದ್ಧಿ ಸ್ವಉದ್ಯೋಗ ತರಬೇತಿ ಕೇಂದ್ರದ ವತಿಯಿಂದ ೧೮-೪೫ ವರ್ಷ ವಯೋಮಿತಿಯ ಒಳಗಿನ ನಿರುದ್ಯೋಗಿ ಯುವಕ ಯುವತಿಯರಿಗೆ ಸಂಪೂರ್ಣವಾಗಿ ಉಚಿತವಾಗಿ ಮುಂದಿನ ತಿಂಗಳಿAದ ೧೦ ದಿನಗಳ ವಿವಿಧ ಸ್ವಉದ್ಯೋಗ ತರಬೇತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

ಕೇಂದ್ರದಲ್ಲಿ ಹೈನುಗಾರಿಕೆ, ಹಂದಿ ಕೋಳಿ, ಜೇನು ಸಾಕಾಣಿಕೆ, ಅಣಬೆ ಬೇಸಾಯ ಪೇಪರ್ ಟವಲ್, ಚೀಲ, ಪೈಪ್ ತಯಾರಿಕೆ, ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪುಡಿಗಳ ತಯಾರಿಕೆ, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ ಸೇರಿದಂತೆ ೧೦ ದಿನಗಳ ಕಾಲದ ವಿವಿಧ ತರಬೇತಿಗಳನ್ನು ಆಯಾ ವಿಭಾಗಕ್ಕೆ ಸಂಬAಧಿಸಿದAತೆ ತರಬೇತಿಯನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೬೮೬೪೦೬೧೮೧, ೯೪೪೯೪೦೨೦೮೧ ಸಂಪರ್ಕಿಸಲು ಕೋರಿದೆ.