ಚೆಯ್ಯಂಡಾಣೆ, ಸೆ. ೨೭: ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘ ೨೦೨೧-೨೨ನೇ ಸಾಲಿನಲ್ಲಿ ರೂ. ೩೬.೧೬ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ತಿಳಿಸಿದರು. ಸಂಘದ ೪೧ನೇ ವಾರ್ಷಿಕ ಮಹಾಸಭೆಯು ಚೆಯ್ಯಂಡಾಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದಲ್ಲಿ ಪೂರ್ಣ ಮತ್ತು ಅಪೂರ್ಣ ಬೆಲೆಯ ಸದಸ್ಯರುಗಳಿದ್ದು ಮೊಬಲಗು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ವಹಿವಾಟು ಸಾಧಿಸಿದೆ. ನಮ್ಮ ಸಂಘದಲ್ಲಿ ಸದಸ್ಯರು ಮತ್ತು ಸದಸ್ಯೇತರರ ಉಳುವರಿ ಮತ್ತು ನಿರಖು ಠೇವಣಿ ಇದ್ದು ಠೇವಣಿ ಸಂಗ್ರಹಣೆಯಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ ಎಂದರು.
ಸAಘವು ವರ್ಷದಲ್ಲಿ ಸ್ವಂತ ಬಂಡವಾಳದಿAದ ಬಳಕೆ ಸಾಲ, ಸ್ವಸಹಾಯ ಗುಂಪು ಸಾಲ, ಜಾಮೀನು ಸಾಲ ನೀಡಿದ್ದು ಗ್ರಾಹಕರ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸುವ ಸಲುವಾಗಿ ರಸಗೊಬ್ಬರ ಮಾರಾಟ ಮಾಡಲಾಗಿದೆ. ಹಾಗೂ ಸಂಘದಲ್ಲಿ ಕೃಷಿಗೆ ಸಂಬAಧಪಟ್ಟ ಹತ್ಯಾರು ವಿಭಾಗ, ಕೀಟ ನಾಶಕ, ಟಾರ್ಪಲ್, ದಿನಬಳಕೆಯ ಸಾಮಗ್ರಿಗಳನ್ನು ನ್ಯಾಯಯುತ ದರದಲ್ಲಿ ಮಾರಾಟ ಮಾಡಲಾಗಿದೆ ಎಂದರು. ಮರಣ ನಿಧಿಯ ಬಗ್ಗೆಯು ಮಾಹಿತಿ ನೀಡಿದರು. ಸಭೆಯಲ್ಲಿ ಕಳೆದ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರುಗಳಿಗೆ ಸಂತಾಪ ಸೂಚಿಸಲಾಯಿತು. ಸಂಘದ ಸದಸ್ಯ ಜಪ್ಪು ದೇವಯ್ಯ ಮಾತನಾಡಿ, ಆಹ್ವಾನ ಪತ್ರಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರ ಹೆಸರಿರದ ಬಗ್ಗೆ ತೀವ್ರ ಅಸಮಾಧಾನ ವಕ್ತಪಡಿಸಿದರು.
ಸದಸ್ಯ ಚೇನಂಡ ಶಿವಾಜಿ ಮಾತನಾಡಿ ಕೂಡಲೇ ಸಹಕಾರ ಸಚಿವರನ್ನು ಭೇಟಿಯಾಗಲು ಅಧ್ಯಕ್ಷ ರಾಜೇಶ್ ಅಚ್ಚಯ್ಯ ನೇತೃತ್ವದಲ್ಲಿ ತಂಡವನ್ನು ರಚಿಸಲು ಆಗ್ರಹಿಸಿದರು. ಇದಕ್ಕೆ ಸಭೆ ಸಮ್ಮತಿಸಿ ತಂಡವನ್ನು ರಚಿಸಲಾಯಿತು.
ಸದಸ್ಯ ಶಾನ್ ಭೋಗರ ಸುಮಂತ್ ಮಾತನಾಡಿ ಸಂಘದ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸಿಲ್ಲ. ಸಹಕಾರ ಸಂಘದಲ್ಲಿ ಯವುದೇ ಮಹಾ ಸಭೆಗೆ ಹಾಜರಾಗದ ಸದಸ್ಯರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಿದ್ದೀರಾ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಮಜಾಯಿಷಿಕೆ ನೀಡಿದ ರಾಜೇಶ್ ಅಚ್ಚಯ್ಯ ಇದನ್ನು ಪರಿಶೀಲಿಸಿ ಮುಂದೆ ಈ ತರದ ಲೋಪದೋಷಗಳು ನಡೆಯದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುದು ಎಂದರು. ಸದಸ್ಯರು ಮಾತನಾಡಿ, ಸಂಘದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ ಮಾರಾಟ ಮಾಡಲು ತಿಳಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಾಚಮಂಡ ಸುಬ್ರಮಣಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಕೆ. ಉಮಾವತಿ, ನಿರ್ದೇಶಕರು ಗಳಾದ ಸಿ.ಟಿ. ಚಂಗಪ್ಪ, ಬೆಳಿಯಂಡ್ರ ಹರಿಪ್ರಸಾದ್, ಎಂ.ಎA. ಗಣಪತಿ, ಪಟ್ಟಚೆರುವಳಂಡ ಪ್ರತಾಪ್, ಬಿ.ಸಿ. ಅಚ್ಚಯ್ಯ, ಎಂ.ಕೆ. ರೇಣು, ಬಟ್ಟಿಯಂಡ ಉಷಾ, ಕೆ.ಯು. ರಾಧಾ ಕೃಷ್ಣ, ನಂಜಪ್ಪ, ಗಣೇಶ್, ಮುಂಡಿಯೋಳAಡ ದೇವಯ್ಯ ಹಾಜರಿದ್ದರು.
ನಿರೂಪಣೆಯನ್ನು ಹಾಗೂ ವಂದನೆಯನ್ನು ಬೆಳಿಯಂಡ್ರ ಹರಿಪ್ರಸಾದ್ ನಿರ್ವಹಿಸಿದರು.