*ಗೋಣಿಕೊಪ್ಪ, ಸೆ. ೨೭: ಗೋಣಿಕೊಪ್ಪ ದಸರಾ ಜನೋತ್ಸವದ ೪೪ನೇ ವರ್ಷದ ಆಚರಣೆಯ ಮೊದಲ ದಿನದ ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಕಾವೇರಿ ಕಲಾ ವೇದಿಕೆಯಲ್ಲಿ ಮಂಗಳೂರಿನ ಹೆಜ್ಜೆನಾದ ತಂಡದಿAದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.
ಹೆಜ್ಜೆನಾದ ತಂಡದ ಸೌಜನ್ಯ, ಖುಷಿ ಶೆಟ್ಟಿ, ಭೂಮಿಕ, ಜ್ಞಾನ ಆಯ್ತಾಳ್, ಪ್ರಕೃತಿ ರಾವ್, ರಶ್ಮಿಕ, ವಂದನ, ಅನನ್ಯ ಕಾಮತ್, ಆರ್ಯ ಇವರುಗಳಿಂದ ನೃತ್ಯ ಹಾಗೂ ಸುಪ್ರಿತ್, ಮೋಹಿತ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಾಂಸ್ಕöÈತಿಕ ಸಂಜೆಯ ಕಾರ್ಯಕ್ರಮಗಳನ್ನು ಸಮಿತಿಯ ಅಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋಲ್ಲಾಸ ಮೂಡಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಹಿಂದೆ ಸಾಂಸ್ಕೃತಿಕ ಹಿನ್ನೆಲೆಗಳಿರುತ್ತದೆ ಎಂದು ದಸರಾ ಆಚರಣೆ ಯಶಸ್ವಿಯಾಗಿ ನಡೆಯಲಿದೆ ಎಂದು ಆಶಿಸಿದರು.
ವೇದಿಕೆಯಲ್ಲಿ ಶ್ರೀ ಕಾವೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಉಪಾಧ್ಯಕ್ಷೆ ವೈ.ಎಂ. ಸವಿತಾ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಡ್ಯಮಾಡ ಸುನೀಲ್ ಮಾದಪ್ಪ, ಕಾವೇರಿ ದಸರಾ ಸಮಿತಿಯ ಸ್ಥಾಪಕ ಉಪಾಧ್ಯಕ್ಷ ಬಿ.ಡಿ. ಮುಕುಂದ, ಸದಸ್ಯ ಎಂ.ಜಿ. ಮೋಹನ್, ದಶ ಮಂಟಪಗಳ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್, ಇಗ್ಗುತಪ್ಪ ಕೊಡವ ಸಂಘದ ಅಧ್ಯಕ್ಷ ಅಜ್ಜಿಕುಟ್ಟೀರ ಸಿ. ದೇವಯ್ಯ ಉಪಸ್ಥಿತರಿದ್ದರು.