ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು ಸೆ. ೨೭: ದೇಶದಲ್ಲಿ ಕಾಫಿ ಬೆಳೆಗಾರರು ಮತ್ತು ಕಾಫಿ ಉದ್ಯಮವನ್ನು ಪ್ರತಿನಿಧಿಸುವ ಸಂಸ್ಥೆ ಆಗಿರುವ ಕಾಫಿ ಬೋರ್ಡ್ ಇದೀಗ ದೇಶದ ಜನತೆಗೆ ಪರಿಶುದ್ಧ ಕಾಫಿ ಪುಡಿಯನ್ನು ಮಾರಲು ಮುಂದಾಗಿದೆ.
ಅAತರ‍್ರಾಷ್ಟಿçÃಯ ಬೆಲೆಯ ಏರಿಳಿತದ ಸವಾಲುಗಳು ಮೇಲುಗೈ ಸಾಧಿಸುತ್ತಿದ್ದಂತೆ, ಕಾಫಿ ಮಂಡಳಿಯು ದೇಶಾದ್ಯಂತ ಶುದ್ಧ ಕಾಫಿಗಾಗಿ ಇರುವ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತಿದೆ. ಕಾಫಿ ಮಂಡಳಿಯು ‘ಇಂಡಿಯಾ ಕಾಫಿ' ಬ್ರಾಂಡ್‌ನಲ್ಲಿ ನಾಲ್ಕು ಪ್ರೀಮಿಯಂ ಕಾಫಿ ಪುಡಿಗಳನ್ನು ಮತ್ತು ‘ಕಾಫೀಸ್ ಆಫ್ ಇಂಡಿಯಾ' ಹೆಸರಿನಲ್ಲಿ ಎರಡು ಕೈಗೆಟುಕುವ ದರದ ಕಾಫಿ ಪುಡಿಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ನಿರ್ಧರಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ.ಎ. ಜಗದೀಶ್ ಅವರು ಈಗ ನಾಲ್ಕು ಪ್ರೀಮಿಯಂ ಕಾಫಿಗಳಾದ ಕೂರ್ಗ್ ಅರೇಬಿಕಾ ಕಾಫಿ (geogಡಿಚಿಠಿhiಛಿಚಿಟ iಜeಟಿಣiಜಿiಛಿಚಿಣioಟಿ) (ಜಿಐ), ಚಿಕ್ಕಮಗಳೂರು ಅರೇಬಿಕಾ ಕಾಫಿ (ಜಿಐ), ೧೦೦% ಅರೇಬಿಕಾ ಕಾಫಿ ಮತ್ತು ಇಂಡಿಯಾ ಕಾಫಿ ಬ್ರಾಂಡ್ ಅಡಿಯಲ್ಲಿ ಅರೇಬಿಕಾ ಮತ್ತು ರೋಬಸ್ಟಾದ ಮಿಶ್ರಣವನ್ನು ಬಿಡುಗಡೆ ಮಾಡುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ'' ಎಂದಿದ್ದಾರೆ. ಅಲ್ಲದೆ, ಕೈಗೆಟುಕುವ ದರದ ಕಾಫಿ ಪುಡಿಗಳಲ್ಲಿ ೧೦೦% ಅರೇಬಿಕಾ ಮತ್ತು ಅರೇಬಿಕಾ ಮತ್ತು ರೋಬಸ್ಟಾದ ಮಿಶ್ರಣವನ್ನು ಒಳಗೊಂಡಿದ್ದು ಇದನ್ನು ‘ಕಾಫೀಸ್ ಆಫ್ ಇಂಡಿಯಾ' ಬ್ರಾಂಡ್ ಅಡಿಯಲ್ಲಿ ಅಮೆಜಾನ್ ಮೂಲಕ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಾಫಿ ಮಂಡಳಿಯು ಅಮೆಜಾನ್ ಸಂಸ್ಥೆಯ ಮೂಲಕ ಕಾಫಿ ಪುಡಿ ಮಾರಾಟಕ್ಕೆ ಯೋಜನೆಯನ್ನು ರೂಪಿಸಿದ್ದು ಇದರಿಂದ ದೇಶದಲ್ಲಿ ಕಾಫಿ ಬಳಕೆಯು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ. ದೇಶದಾದ್ಯಂತ ಲಕ್ಷಾಂತರ ಕಾಫಿ ತಜ್ಞರ ಅಭಿರುಚಿಗೆ ತಕ್ಕಂತೆ ನಮ್ಮ ಕಾಫಿ ಬೀಜಗಳನ್ನು ಅತ್ಯುತ್ತಮ ಕಾಫಿ ಎಸ್ಟೇಟ್ಗಳಿಂದ ಪಡೆಯಲಾಗಿದೆ” ಎಂದು ಡಾ. ಜಗದೀಶ್ ‘ಶಕ್ತಿ’ಗೆ ಹೇಳಿದರು.
೨೦೨೨ ರ ಏಪ್ರಿಲ್-ಜೂನ್‌ನಲ್ಲಿ ದೇಶದ ಕಾಫಿ ರಫ್ತು ೯೦% ರಷ್ಟು ಏರಿಕೆಯಾಗಿದೆ. ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟçವಾಗಿ, ಭಾರತವು ತನ್ನ ಕಾಫಿಯ ೭೦% ಅನ್ನು ವಿದೇಶಗಳಿಗೆ ರಫ್ತು ಮಾಡುತ್ತದೆ. ಉತ್ತಮ ಗುಣಮಟ್ಟದ ಕಾಫಿಯ ಮೂಲಕ್ಕೆ ಹೆಸರುವಾಸಿಯಾಗಿರುವ ಪ್ರದೇಶವೆಂದು ಮೆಚ್ಚುಗೆ ಪಡೆದಿರುವ ಭಾರತವು ಏಳು ಜಿಐ-ನೋಂದಾಯಿತ ಕಾಫಿಗಳೊಂದಿಗೆ ಜಾಗತಿಕವಾಗಿ ಉತ್ಕೃಷ್ಟ ಕಾಫಿಗೆ ಹೆಸರುವಾಸಿ ಆಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಫಿ ಮಂಡಳಿಯ ಮಾಜಿ ಉಪಾಧÀ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಅವರು ಇದರಿಂದಾಗಿ ದೇಶದ ಆಂತರಿಕ ಕಾಫಿ ಬಳಕೆ ಹೆಚ್ಚಾಗಲಿದೆ. ಅಲ್ಲದೆ ಕಾಫಿ ಬಳಕೆಯೇ ಇಲ್ಲದ ಉತ್ತರದ ರಾಜ್ಯಗಳಲ್ಲಿ ಕಾಫಿಯ ಬಳಕೆ ಹೆಚ್ಚಾಗಲಿದ್ದು ಮಾರಾಟಕ್ಕಾಗಿ ವಿದೇಶಿ ಅವಲಂಬನೆ ಕಡಿಮೆ ಆಗಲಿದೆ ಎಂದು ಹೇಳಿದರು. ವಿಶ್ವದ ಇತರ ಕಾಫಿ ಬೆಳೆಯುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಂತರಿಕ ಬಳಕೆ ಅತ್ಯಂತ ಕಡಿಮೆ ಇದ್ದು ಇದು ಹೆಚ್ಚಾದಲ್ಲಿ ಬೆಲೆ ಸ್ಥಿರತೆ ಆಗಲಿದೆ ಎಂದು ಅವರು ಹೇಳಿದರು.