ಪೊನ್ನಂಪೇಟೆ, ಸೆ. ೨೮: ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮತ್ತು ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟದ ಧ್ವಜಾರೋಹಣವನ್ನು ತಹಶೀಲ್ದಾರ್ ಎಸ್. ಎನ್. ಪ್ರಶಾಂತ್ ನೆರವೇರಿಸಿದರು.
ಮಾಜಿ ಜಿ.ಪಂ. ಸದಸ್ಯ ಮೂಕಳೆರ ಕುಶಾಲಪ್ಪ ಪಥ ಸಂಚಲನ ವಂದನೆ ಸ್ವೀಕರಿಸಿದರು. ಅಂರ್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕ್ರೀಡಾ ಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳು ದಿನನಿತ್ಯ ವ್ಯಾಯಾಮ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡು, ಓದಿನ ಜೊತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
ಅAತರಾಷ್ಟಿçÃಯ ಹಾಕಿ ಕ್ರೀಡಾಪಟು ಎನ್.ಪಿ. ಯಜ್ಞ ಅವರು ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಭೋದಿಸಿದರು. ಪೊನ್ನಂಪೇಟೆ ಗ್ರಾ.ಪಂ. ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ ಸದಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ, ನಿವೃತ್ತ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಪಿ.ಡಿ. ರತಿ, ನಿವೃತ್ತ ಶಿಕ್ಷಕಿ ಕೊಡಂದೆರ ಸ್ವಾತಿ, ಎಸ್ಡಿಎಂಸಿ ಅಧ್ಯಕ್ಷ ರಘುನಾಥ್ ಶರ್ಮ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಪಲ್ಲೆದ್, ಪ್ರಗತಿ ಶಾಲೆಯ ಮುಖ್ಯ ಶಿಕ್ಷಕಿ ಬಿಂದು ವಿ. ಕುರುಪ್ ಸೇರಿದಂತೆ ಇತರರು ಇದ್ದರು.
ಜಿಲ್ಲಾಮಟ್ಟಕ್ಕೆ ಆಯ್ಕೆ: ಪ್ರೌಢಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಕಳತ್ಮಾಡು ಲಯನ್ಸ್ ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಅರ್ವತೋಕ್ಲು ಸರ್ವದೈವತ ಶಾಲೆ ಪಡೆದುಕೊಂಡಿತು.
ಪ್ರಾಥಮಿಕ ಬಾಲಕರ ವಿಭಾಗದಲ್ಲಿ ೧೦೦ ಮೀಟರ್ ಓಟ ರಾಜೇಶ್ ಬಾಡಗರಕೇರಿ ಶಾಲೆ, ೪೦೦ ಮೀಟರ್ ಓಟ ಸಿದ್ದು ಬಿ.ಎಸ್. ಗ್ಲೇನ್ ಲೂರ್ನ್ ಶಾಲೆ, ೬೦೦ ಮೀಟರ್ ಓಟ ಪಿ.ಸಿ ಅಯ್ಯಪ್ಪ ಪೊನ್ನಂಪೇಟೆ
ಕೆಪಿಎಸ್ ಶಾಲೆ, ಉದ್ದಜಿಗಿತ ವೈ.ಎ. ಸಂದೀಪ ಹಾತೂರು ಜಿಎಂಪಿ ಶಾಲೆ, ಭಾರದ ಗುಂಡು ಎಸೆತ ವಿ.ಆರ್. ಕೌಶಿಕ್, ಚಕ್ರ ಎಸೆತ ವೈ.ಸಿ. ಸುಬ್ರಮಣಿ, ಬಾಲಕಿಯರ ವಿಭಾಗದ ೧೦೦ ಮೀಟರ್ ಓಟ ನೇನಾ ಕರುಂಬಯ್ಯ ರೂಟ್ಸ್ ಶಾಲೆ, ೪೦೦ ಮೀಟರ್ ಓಟ ಬಿ.ಜೆ. ಭುವಿ ಗೋಣಿಕೊಪ್ಪ ಲಿಟಲ್ ಫ್ಲವರ್ ಶಾಲೆ, ೬೦೦ ಮೀಟರ್ ಓಟ ಸಜಿನಿ ಪೋನ್ನಂಪೇಟೆ ಕೆಪಿಎಸ್,ಉದ್ದ ಜಿಗಿತ ಎಚ್.ಜಿ. ಜನನಿ ದೇವರಪುರ ರಾಜೇಶ್ವರಿ ಶಾಲೆ, ಪ್ರೌಢಶಾಲಾ ಬಾಲಕರ ವಿಭಾಗದ ೧೦೦ ಮೀಟರ್ ಓಟ ಎಸ್. ದವಲ್, ಪಾಲಿಬೆಟ್ಟ ನಮ್ಮ ಪ್ರೌಢ ಶಾಲೆ, ೪೦೦ ಮೀಟರ್ ಓಟ ರುತ್ವಿಕ್ ಕಳತ್ಮಾಡು ಲಯನ್ಸ್ ಶಾಲೆ, ೮೦೦ ಮೀಟರ್ ಓಟ ಶಿವಾನ್ ಪೊನ್ನಣ್ಣ, ಪೊನ್ನಂಪೇಟೆ ಸಂತ ಅಂತೋಣಿ, ೩೦೦೦ ಮೀಟರ್ ಓಟ ಬಿ.ಜೆ. ಗಣಪತಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢ ಶಾಲೆ, ಭಾರದ ಗುಂಡು ಎಸೆತ ಧನುಷ್ ಕುಮಾರ್ ಪೋನ್ನಂಪೇಟೆ ಸಂತ ಅಂತೋಣಿ, ಭರ್ಜಿ ಎಸೆತ ಪ್ರಾರ್ಥನ್ ಲೂರ್ಡ್ಸ್ ಶಾಲೆ, ತಟ್ಟೆ ಎಸೆತ ಮೊಹಮದ್ ಆಜಿಮ್ ಲೂರ್ಡ್ಸ್ ಶಾಲೆ, ಉದ್ದ ಜಿಗಿತ ಇರ್ಫಾನ್ ಬಿಳುಗುಂದ ಶಾಲೆ, ಎತ್ತರ ಜಿಗಿತ ಪಿ.ಎ. ರಾಮು ಶ್ರೀಮಂಗಲ ಪ್ರೌಢಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.