ಮಡಿಕೇರಿ, ಸೆ. ೨೭: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿಯು ೯೨ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ದಂಡಿನ ಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ಎಂ.ಎಫ್. ಅಮನ್ ತಿಳಿಸಿದ್ದಾರೆ.

ಎರಡು ಟ್ರಾö್ಯಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಪ್ಲಾಟ್‌ಫಾರಂನ್ನು ಸಮಿತಿ ಸದಸ್ಯರು ನಿರ್ಮಿಸಲಿದ್ದಾರೆ. ಈ ಬಾರಿ ಭೂಲೋಕ ರಕ್ಷಣೆಗೆ ಪಾರ್ವತಿಯ ಶಾಖಾಂಭರಿ ರೂಪ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಲೈಟಿಂಗ್ ಬೋರ್ಡ್ ಅನ್ನು ಮಡಿಕೇರಿಯ ಪ್ರೊಫೆಷನಲ್ ಲೈಟ್ಸ್ ಸಂಸ್ಥೆ ಅಳವಡಿಸಲಿದೆ. ಧ್ವನಿವರ್ಧಕವನ್ನು ಮಡಿಕೇರಿಯ ಸ್ಕಂದ ಡೆಕೋರೇರ‍್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೋ ಸೆಟ್ಟಿಂಗ್ಸ್ನ್ನು ಮಡಿಕೇರಿಯ ಪ್ರೀತಿ ಲೈಟ್ಸ್ ತಂಡ ಮಾಡಲಿದೆ. ಟ್ರಾö್ಯಕ್ಟರ್ ಸೆಟ್ಟಿಂಗ್ಸ್ನ್ನು ಅಸ್ತಿತ್ವ ಕ್ರಿಯೇಷನ್‌ನ ಸುನಿಲ್ ಮನು ಹಾಗೂ ಕ್ರಿಯೆಟಿವ್ ಸ್ಟುಡಿಯೋ ತಂಡ ಮಾಡಲಿದ್ದು, ಕ್ರೇನ್ ಸೆಟ್ಟಿಂಗ್ಸ್ನ್ನು ನಿಖಿಲ್ ಮತ್ತು ಶಿವು ಮಾಡಲಿದ್ದಾರೆ. ೨೨ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಹಾಗೂ ಸಮಿತಿಯ ಸದಸ್ಯರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಕಲಾಕೃತಿಗಳಿಗೆ ಚಲನ - ವಲನವನ್ನು ಅಸ್ತಿತ್ವ ಕ್ರಿಯೇಷನ್, ಕ್ರಿಯೇಟಿವ್ ಸ್ಟುಡಿಯೋ ಹಾಗೂ ಎಸ್‌ಡಿಎಂ ಸಮಿತಿ ಸದಸ್ಯರು ನೀಡಲಿದ್ದಾರೆ.

ಒಟ್ಟು ೧೬ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದ್ದು, ಜನಾಕರ್ಷಣೆ ಪಡೆಯುವುದರ ಜೊತೆಗೆ ಬಹುಮಾನಕ್ಕೆ ಪೈಪೋಟಿ ನೀಡಲಾಗುತ್ತದೆ ಎಂದು ಅಮನ್ ಮಾಹಿತಿ ನೀಡಿದ್ದಾರೆ.

-ಉಜ್ವಲ್ ರಂಜಿತ್