*ಗೋಣಿಕೊಪ್ಪ, ಸೆ. ೨೭: ೪೪ನೇ ದಸರಾ ಜನೋತ್ಸವದ ಅಂಗವಾಗಿ ೭ನೇ ವರ್ಷದ ಮಹಿಳಾ ದಸರಾ ತಾ. ೨೮ ರಂದು (ಇಂದು) ಚೈತ್ರ ಬಿ. ಚೇತನ್ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾವೇದಿಕೆಯಲ್ಲಿ ನಡೆಯಲಿದೆ.

ಬೆಳಿಗ್ಗೆ ೯.೩೦ ರಿಂದ ಸಂಜೆ ೪ ಗಂಟೆವರೆಗೆ ಮಹಿಳೆಯರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕöÈತಿಕ ಕಾರ್ಯಕ್ರಮದಲ್ಲಿ ಸಾಮೂಹಿಕ ಜನಪದ ನೃತ್ಯ, ಜಾನಪದ ಗೀತೆ, ಆಟೋಟ ಸ್ಪರ್ಧೆಯಲ್ಲಿ ಬಾಂಬ್ ಇನ್ ದ ಸಿಟಿ, ಸಂಗೀತ ಕುರ್ಚಿ ಹಾಗೂ ಬೆಂಕಿ ಇಲ್ಲದ ಅಡುಗೆ, ಕಸದಿಂದ ರಸ, ಹೂವಿನ ಅಲಂಕಾರ, ಛದ್ಮವೇಷ, ವಾಲಗ ನೃತ್ಯ ಕಾರ್ಯಕ್ರಮಗಳು ಹಾಗೂ ಕೊರೊನಾ ವಾರಿಯರ್ಸ್ ಸಾಧಕರಿಗೆ ಸನ್ಮಾನ ನಡೆಯಲಿದೆ.

ಮಹಿಳಾ ದಸರಾವನ್ನು ವಿಶ್ವ ಬಿಲಿಯಡ್ಸ್ ಚಾಂಪಿಯನ್ ಉಮಾದೇವಿ ನಾಗರಾಜ್ ಹಾಗೂ ಇನ್ ಪ್ರಾಕ್ಟೀಸ್ ಸಂಸ್ಥೆಯ ಕಾರ್ಯದರ್ಶಿ ದೇವಿಕ ಸತ್ಯನಾರಾಯಣ್ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಗೌರವಾಧ್ಯಕ್ಷೆ ರತಿ ಅಚ್ಚಪ್ಪ, ಉಪಾಧ್ಯಕ್ಷೆ ಸವಿತಾ ವೈ.ಎಂ., ರಾಣಿ ನಾರಾಯಣ, ಮಹಿಳಾ ಉದ್ಯಮಿ ಕರ್ತಮಾಡ ಚಿತ್ರ ಸುಜು, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಲ್ಚೀರ ಕವಿತಾ ಬೋಜಮ್ಮ ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್, ಕಾರ್ಯಾಧ್ಯಕ್ಷ ಸಿ.ಕೆ. ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.