ಭಾಗಮಂಡಲ, ಸೆ. ೨೭: ಅಕ್ಟೋಬರ್ ೧೭ ರಂದು ಜರುಗುವ ತುಲಾ ಸಂಕ್ರಮಣ ಜಾತ್ರೆಗೆ ಸಂಬAಧಿಸಿದAತೆ ಭಾಗಮಂಡಲ ಭಗಂಡೇಶ್ವರ ದೇವಾಲಯದಲ್ಲಿ ಇಂದು ಚಾಲನೆ ದೊರೆಯಿತು. ಬಳ್ಳಡ್ಕ ಐನ್ ಮನೆಯಲ್ಲಿ ಬಳ್ಳಡ್ಕ ಕುಟುಂಬಸ್ಥರು ಸೇರಿ ಪ್ರಾರ್ಥನೆ ಸಲ್ಲಿಸಿ ಕಾವೇರಿ ಗದ್ದೆಯಲ್ಲಿ ಬೆಳೆದ ಧಾನ್ಯವನ್ನು ಭಗಂಡೇಶ್ವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಿದ ಬಳಿಕ ಭಗಂಡೇಶ್ವರ ದೇವಾಲಯದಲ್ಲಿರುವ ಪತ್ತಾಯಕ್ಕೆ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅವರು ೧೧.೦೫ ಗಂಟೆಗೆ ವೃಶ್ಚಿಕ ಲಗ್ನದಲ್ಲಿ ಅಕ್ಕಿ ಹಾಕುವುದರೊಂದಿಗೆ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಕ್ಟೋಬರ್ ೫ ರಂದು ಬೆಳಿಗ್ಗೆ ೯.೩೫ ಗಂಟೆಗೆ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ ನಡೆಯಲಿದೆ. ಈ ಸಂದರ್ಭ ತಲಕಾವೇರಿ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪಾರು ಪತ್ತೆಗಾರ ಪೊನ್ನಣ್ಣ ಸೇರಿದಂತೆ ಸ್ಥಳೀಯ ಭಕ್ತರು ಹಾಜರಿದ್ದರು. -ಸುನಿಲ್