*ಗೋಣಿಕೊಪ್ಪ, ಸೆ. ೨೬: ಗೋಣಿಕೊಪ್ಪ ದಸರಾ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ಮತ್ತು ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಆಯುಧ ಪೂಜೆ ಮತ್ತು ವಿಜಯದಶಮಿಗೆ ದೀಪಾಲಂಕಾರ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ ೪ ರಂದು ತೀರ್ಪುಗಾರರು ಪಟ್ಟಣದಲ್ಲಿ ವೀಕ್ಷಣೆ ನಡೆಸಿ ಫಲಿತಾಂಶ ನೀಡಲಿದ್ದಾರೆ. ೧೦ ವಿಭಾಗಕ್ಕೆ ತಲಾ ಮೂರು ಬಹುಮಾನ ನೀಡಲಾಗುವುದು. ಬೃಹತ್ ವಾಣಿಜ್ಯ ಮಳಿಗೆ- ಬ್ಯಾಂಕ್ ಮತ್ತು ಸರ್ಕಾರಿ ಕಚೇರಿ, ಬೇಕರಿ ಮತ್ತು ದಿನಸಿ ಅಂಗಡಿ, ಚಿನ್ನದ ಮಳಿಗೆ, ಎಲೆಕ್ಟಿçಕಲ್, ಮೊಬೈಲ್ ಶಾಪ್, ಬ್ಯೂಟಿ ಪಾರ್ಲರ್, ಸಲೂನ್, ಹೊಟೇಲ್, ಮದ್ಯದ ಮಳಿಗೆ, ವರ್ಕ್ಶಾಪ್, ಸರ್ವಿಸ್ ಸ್ಟೇಷನ್, ಹಾರ್ಡ್ವೇರ್ ಮತ್ತು ಪೈಂಟ್ ಅಂಗಡಿ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಫರ್ನಿಚರ್ ಶಾಪ್, ರೆಡಿಮೇಡ್ ಬಟ್ಟೆ ಅಂಗಡಿ, ಇನ್ನಿತರ ಬಟ್ಟೆ ಮಳಿಗೆ, ಇತರೆ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಪೊನ್ನಿಮಾಡ ಸುರೇಶ್, ಶಿವಾಜಿ, ಪ್ರಭಾಕರ್ ನೆಲ್ಲಿತ್ತಾಯ, ಮನೋಹರ್ ಇದ್ದರು.